ರೇಷನ್ ಕಾರ್ಡ್ ಬಗ್ಗೆ ಮಹತ್ವದ ಸುದ್ದಿಯೊಂದಿದೆ. ಈಗ ಪಡಿತರ ಚೀಟಿ ಪಡೆಯುವುದು ಮೊದಲಿನಷ್ಟು ಸುಲಭವಲ್ಲ. ಪಡಿತರ ಚೀಟಿ ತಯಾರಿಸುವ ಪ್ರಕ್ರಿಯೆ ಮೊದಲಿಗಿಂತ ಹೆಚ್ಚು ಜಟಿಲವಾಗಿದೆ. ಪಡಿತರ ಚೀಟಿ ನವೀಕರಣ, ಹೊಸ ಪಡಿತರ ಚೀಟಿ ತಯಾರಿಕೆ, ಪಡಿತರ ಚೀಟಿಯಲ್ಲಿ ಹೆಸರು ಸೇರಿಸುವುದು ಸೇರಿದಂತೆ ಅನೇಕ ಕೆಲಸಗಳಿಗೆ 10ಕ್ಕಿಂತಲೂ ಹೆಚ್ಚು ದಾಖಲೆಗಳನ್ನು ನೀಡಬೇಕಾಗುತ್ತದೆ.
ಹೊಸ ಸಾಪ್ಟ್ ವೇರ್ ಗೆ ಹೆಚ್ಚಿನ ದಾಖಲೆ ನೀಡಬೇಕಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಗೆ ಸಂಬಂಧಿಸಿದ ಸಾಫ್ಟ್ ವೇರನ್ನು ಕೇಂದ್ರ ಸರ್ಕಾರವು ನಿರ್ವಹಿಸುತ್ತದೆ. ಅದರ ಮೂಲಕ ಪಡಿತರ ಚೀಟಿಗಳನ್ನು ತಯಾರಿಸಲಾಗುತ್ತದೆ. ಹೊಸ ಪಡಿತರ ಚೀಟಿಗಳನ್ನು ತಯಾರಿಸುವ ಕಷ್ಟಕರವಾಗಿದ್ದು, ಜನರಿಗೆ ತೊಂದರೆಯಾಗಲಿದೆ.
ಪಡಿತರ ಚೀಟಿ ತಯಾರಿಸಲು ಕುಟುಂಬದ ಮುಖ್ಯಸ್ಥರ ಪಾಸ್ಪೋರ್ಟ್ ಗಾತ್ರದ ಫೋಟೋ ಕಡ್ಡಾಯವಾಗಿದೆ. ಪಡಿತರ ಚೀಟಿ ರದ್ದತಿ ಪ್ರಮಾಣಪತ್ರ ಬೇಕಾಗುತ್ತದೆ. ಮುಖ್ಯಸ್ಥರ ಬ್ಯಾಂಕ್ ಖಾತೆಯ ಮೊದಲ ಮತ್ತು ಕೊನೆಯ ಪುಟದ ಫೋಟೊಕಾಪಿ ನೀಡಬೇಕು. ಗ್ಯಾಸ್ ಪುಸ್ತಕದ ಫೋಟೋಕಾಪಿ, ಇಡೀ ಕುಟುಂಬ ಅಥವಾ ಜನರ ಆಧಾರ್ ಕಾರ್ಡಿನ ಫೋಟೊಕಾಪಿ ನೀಡಬೇಕಾಗುತ್ತದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲರ ಜನನ ಪ್ರಮಾಣಪತ್ರ ಅಥವಾ ಪ್ರೌಢ ಶಾಲಾ ಪ್ರಮಾಣಪತ್ರ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಪ್ಯಾನ್ ಕಾರ್ಡ್‌ನ ನಕಲು ಪ್ರತಿ ನೀಡಬೇಕು. ಜಾತಿ ಪ್ರಮಾಣಪತ್ರದ ನಕಲು ಪ್ರತಿ ನೀಡಬೇಕು. ವಿಕಲಾಂಗರು, ಅಂಗವೈಕಲ್ಯ ಪ್ರಮಾಣಪತ್ರದ ಫೋಟೋಕಾಪಿ ನೀಡಬೇಕು.
ಎಂಎನ್ಆರ್ಇಜಿಎ ಜಾಬ್ ಕಾರ್ಡ್ ಹೊಂದಿರುವವರಾಗಿದ್ದರೆ, ಜಾಬ್ ಕಾರ್ಡ್‌ನ ಫೋಟೊಕಾಪಿ ನೀಡಬೇಕು. ವೇತನದ ಸ್ಲಿಪ್ ಅಥವಾ ಆದಾಯ ತೆರಿಗೆ ರಿಟರ್ನ್ ರಶೀದಿ ನೀಡಬೇಕು. ಇತ್ತೀಚಿನ ವಿದ್ಯುತ್ ಬಿಲ್, ಇತ್ತೀಚಿನ ನೀರಿನ ಬಿಲ್, ವಿಳಾಸ ಪುರಾವೆಗಾಗಿ ಬಾಡಿಗೆ ಒಪ್ಪಂದದ ಪೋಟೋಕಾಪಿ ನೀಡಬೇಕು. ಪಡಿತರ ಚೀಟಿಯನ್ನು ಆನ್‌ಲೈನ್‌ನಲ್ಲಿ ಪಡೆಯುವುದು ಕಡ್ಡಾಯವಾಗಿದೆ.
ಕೆಲವು ತಿಂಗಳ ಹಿಂದಿನವರೆಗೂ, ಪಡಿತರ ಚೀಟಿ ಪಡೆಯುವುದು ತುಂಬಾ ಸುಲಭವಾಗಿತ್ತು. ಹೊಸ ಪಡಿತರ ಚೀಟಿ ಪಡೆಯಲು, ಫೋಟೋ, ಗುರುತಿನ ಚೀಟಿ, ವಿಳಾಸ ಪುರಾವೆ, ಸರ್ಕಾರಿ ಕೆಲಸ ಅಥವಾ ಖಾಸಗಿ ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆಗಳು ಮಾತ್ರ ಅಗತ್ಯವಿದ್ದವು.