ಗಡಿ ಭದ್ರತಾ ಪಡೆಯು ಆಹ್ವಾನಿಸಿರುವ 7545 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ssc.nic.in ಗೆ ಭೇಟಿ ನೀಡಬಹುದಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಇಲಾಖೆಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.
ವಯಸ್ಸಿನ ಮಿತಿ : ಆಗಸ್ಟ್ 1ನೇ ತಾರೀಖಿಗೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರಬಾರದು ಹಾಗೂ 23 ವರ್ಷ ಪ್ರಾಯ ಮೀರಿರಬಾರದು. ಅಂದರೆ ಅಭ್ಯರ್ಥಿಗಳು 1998ರ ಆಗಸ್ಟ್ 2ಕ್ಕಿಂತ ಮೊದಲು ಜನಿಸಬಾರದು ಹಾಗೂ 2003 ಆಗಸ್ಟ್1ರ ನಂತರ ಜನಿಸಬಾರದು.
ಅರ್ಜಿ ಸಲ್ಲಿಸುವುದು ಹೇಗೆ..?
ಹಂತ 1: ssc.nic.in ವೆಬ್ಸೈಟ್ಗೆ ಭೇಟಿ ನೀಡಿ.
ಹಂತ 2 : ವೆಬ್ಸೈಟ್ನ ಹೋಮ್ಪೇಜ್ನಲ್ಲಿರುವ ರಿಜಿಸ್ಟ್ರೇಷನ್ ಲಿಂಕ್ ಮೇಲೆ ಒತ್ತಿರಿ.
ಹಂತ 3: ಈ ಪೇಜ್ನಲ್ಲಿ ನಿಮಗೆ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಸಲ್ಲಿಸಿ
ಹಂತ 4: ಅಭ್ಯರ್ಥಿಗಳು ಆಯೋಗದ ನೋಂದಣಿ ಸಂಖ್ಯೆ ಹಾಗೂ ಪಾಸವರ್ಡ್ನ ಸಹಾಯದಿಂದ ಲಾಗಿನ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹಂತ 5 : ಅರ್ಜಿ ಸಲ್ಲಿಸಿದ ಬಳಿಕ ಸಪ್ಟೆಂಬರ್ 2ರಂದು ಆನ್ಲೈನ್ ಶುಲ್ಕ ಪಾವತಿ ಮಾಡಬೇಕು.
ಆಫ್ಲೈನ್ನಲ್ಲಿ ಅರ್ಜಿ ಶುಲ್ಕ ಸಲ್ಲಿಸಬಯಸುವವರು ಸೆಪ್ಟೆಂಬರ್ 4ರಂದು ಬ್ಯಾಂಕ್ ಚಲನ್ ಜನರೇಟ್ ಮಾಡಬೇಕು.