ಭಾರತೀಯ ಹವಾಮಾನ ಇಲಾಖೆಯು ಕೇರಳ, ತಮಿಳು ನಾಡು ಹಾಗೂ ಕರ್ನಾಟಕದಲ್ಲಿ ಇಂದಿನಿಂದ ಆಗಸ್ಟ್ 30ರವರೆಗೆ ಭಾರೀ ಮಳೆ ಸಂಭವಿಸಲಿದೆ ಎಂದು ಮುನ್ಸೂಚನೆ ನೀಡಿದೆ.
ಮುಂಬರುವ 2 ದಿನಗಳಲ್ಲಿ (ಆಗಸ್ಟ್ 29 ಹಾಗೂ 30) ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಭಾರೀ ಮಳೆ ಸಂಭವಿಸಲಿದೆ.
ಶನಿವಾರ ಹಾಗೂ ಭಾನುವಾರ ತಮಿಳುನಾಡು ಘಟ್ಟ ಪ್ರದೇಶ , ಕೇರಳ ಹಾಗೂ ಮಾಹೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇರಳದಲ್ಲಿ ಅತೀಯಾಗಿ ಮಳೆ ಸಂಭವಿಸುವ ಮುನ್ಸೂಚನೆ ಹಿನ್ನೆಲೆ ಹವಾಮಾನ ಇಲಾಖೆಯು ಕೇರಳದ ಆರು ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇಡುಕ್ಕಿ, ಪಲಕ್ಕಾಡ್, ಮಲಪ್ಪುರಂ, ಕೊಝಿಕೋಡೆ, ವಯ್ನಾಡ್ ಹಾಗೂ ಕಣ್ಣೂರು ಆರೆಂಜ್ ಅಲರ್ಟ್ ಘೋಷಣೆಯಾದ ಕೇರಳದ ಜಿಲ್ಲೆಗಳಾಗಿವೆ. ನೈಋತ್ಯ ಮುಂಗಾರು ಕೇರಳದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಐಎಂಡಿ ಹೇಳಿದೆ.
ಅಲ್ಲದೇ ಮೀನುಗಾರರಿಗೂ ಕೂಡ ಆಗಸ್ಟ್ 30ರವರೆಗೆ ಮೀನುಗಾರಿಕೆ ನಡೆಸದಂತೆ ಮುನ್ಸೂಚನೆ ನೀಡಲಾಗಿದೆ .