ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗುಡ್ಡದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈವರೆಗೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಸ್ಥಳೀಯರು ಈ ಕೃತ್ಯದಲ್ಲಿ ಪಾಲ್ಗೊಂಡಿರಬಹುದೆಂದು ಶಂಕಿಸಲಾಗಿತ್ತಾದರೂ ಇದೀಗ ಆರೋಪಿಗಳ ಕುರಿತಂತೆ ಮತ್ತೊಂದು ಮಹತ್ವದ ಸುಳಿವು ಸಿಕ್ಕಿದೆ.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ನಾಲ್ವರು ಆರೋಪಿಗಳು ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಹೊರರಾಜ್ಯದ ವಿದ್ಯಾರ್ಥಿಗಳು ಎಂದು ಹೇಳಲಾಗಿದ್ದು, ಈ ಪೈಕಿ ಮೂವರು ತಮಿಳುನಾಡಿನವರಾಗಿದ್ದರೆ ಮತ್ತೋರ್ವ ಕೇರಳದ ವಿದ್ಯಾರ್ಥಿ ಎಂದು ಹೇಳಲಾಗಿದೆ. ಕೃತ್ಯವೆಸಗಿದ ನಂತರ ಆರೋಪಿಗಳು ಒಂದು ದಿನ ಮೈಸೂರಿನಲ್ಲಿದ್ದು ಬಳಿಕ ಕೇರಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ತೆರಿಗೆದಾರರೇ ಗಮನಿಸಿ: 2 ತಿಂಗಳ ಜಿಎಸ್ಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಜಿಎಸ್ಟಿಆರ್-1 ಸಲ್ಲಿಸುವಂತಿಲ್ಲ
ಮೊಬೈಲ್ ಟವರ್ ಸಿಗ್ನಲ್ ಹಾಗೂ ಕರೆಗಳ ಮಾಹಿತಿ ಆಧರಿಸಿ ಅತ್ಯಾಚಾರ ಕೃತ್ಯದಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ನಾಲ್ವರು ವಿದ್ಯಾರ್ಥಿಗಳು ಕೇರಳದಲ್ಲಿ ತಲೆ ಮರೆಸಿಕೊಂಡಿರಬಹುದೆಂಬ ಕಾರಣಕ್ಕೆ ಅವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಲುವಾಗಿ ಕೇರಳಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.