2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಮಯ ಕೂಡಿ ಬಂದಿದೆ. ಇದೇ ವೇಳೆ ಉದ್ಯೋಗಸ್ಥರು ಸಲ್ಲಿಸುವ ಐಟಿಆರ್-1 ಅಥವಾ ಸಹಜ್ ಅರ್ಜಿ ಸಲ್ಲಿಸಬೇಕಾಗುತ್ತದೆ.
ತೆರಿಗೆಗೆ ಒಳಪಡದ ಭತ್ಯೆಗಳು, ಸಂಬಳಕ್ಕೆ ತಕ್ಕಂತೆ ಲಾಭ, ಇನ್ನಿತರ ವರಮಾನಗಳ ಮೌಲ್ಯ ಸೇರಿದಂತೆ ಎಲ್ಲವನ್ನೂ ಈ ಅರ್ಜಿಗಳಲ್ಲಿ ಭರ್ತಿ ಮಾಡಬೇಕಾಗುತ್ತದೆ.
ಐಟಿಆರ್-1 ಸಹಜ್ ಫೈಲಿಂಗ್ ಮಾಡಬೇಕಾದಲ್ಲಿ ನೀವು ಈ 9 ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಬೇಕಾಗುತ್ತದೆ.
SHOCKING NEWS: ಸಂಬಂಧಿಕರಿಂದಲೇ ಸುಪಾರಿ…? ಶೂಟೌಟ್ ಗೆ ಬಲಿಯಾದ ಅಮಾಯಕ…!
1. ಸಾಮಾನ್ಯ ಮಾಹಿತಿ: ಪಾನ್, ಆಧಾರ್ ಕಾರ್ಡ್ ಸಂಖ್ಯೆ
2. ವೇತನ/ಪಿಂಚಣಿ: ಉದ್ಯೋಗದಾತರಿಂದ ಫಾರಂ 16
3. ಮನೆ ಆಸ್ತಿಯ ಆದಾಯ: ಬಾಡಿಗೆ ರಸೀದಿ; ಬಡ್ಡಿದರದಲ್ಲಿ ಕಡಿತ ಮಾಡಲು ಗೃಹ ಸಾಲದ ಖಾತೆಯ ಸ್ಟೇಟ್ಮೆಂಟ್
4. ಇತರ ಮೂಲಗಳು: ಉಳಿತಾಯ ಖಾತೆಗಳು ಹಾಗೂ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ವಿವರಗಳನ್ನು ಸೂಚಿಸುವ ಬ್ಯಾಂಕ್ ಹೇಳಿಕೆ/ಪಾಸ್ಬುಕ್
5. ಅಧ್ಯಾಯ 4-ಎ ಅಡಿ ಕಡಿತದ ಕ್ಲೇಂ:
ಪಿಎಫ್/ಎನ್ಪಿಎಫ್ಗೆ ನಿಮ್ಮ ಕೊಡುಗೆ
ನಿಮ್ಮ ಮಕ್ಕಳ ಶಾಲಾ ಶುಲ್ಕ
ಜೀವ ವಿಮಾ ಪ್ರೀಮಿಯಂ ರಸೀದಿ
ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕಗಳು
ನಿಮ್ಮ ಗೃಹ ಸಾಲದ ಅಸಲು ಮರುಪಾವತಿ ವಿವರ
ಇಕ್ವಿಟಿ ಲಿಂಕ್ ಮಾಡಲ್ಪಟ್ಟ ಉಳಿತಾಯ ಯೋಜನೆ/ಮ್ಯೂಚುವಲ್ ಫಂಡ್ಸ್ ಹೂಡಿಕೆಗಳು
80ಜಿ ಅಡಿ ಬರಬಲ್ಲ ವಿವರಗಳಿರುವ ರಸೀದಿ
6. ತೆರಿಗೆ ಪಾವತಿ ವಿವರಗಳು: ಅರ್ಜಿ 26ಎಎಸ್ ಮೂಲಕ ತೆರಿಗೆ ಪಾವತಿ ವಿವರಗಳನ್ನು ಖಾತ್ರಿ ಮಾಡಿ
7. ಟಿಡಿಎಸ್ ವಿವರಗಳು
8.ಹೂಡಿಕೆ ವಿವರಗಳು
9. ಇತರೆ ಮಾಹಿತಿ