ಟಿಕ್ಟಾಕ್ ವೇದಿಕೆಯಲ್ಲಿ ಭಾರಿ ವೈರಲ್ ಆಗಿದ್ದ ‘ಮಿಲ್ಕ್ ಕ್ರೇಟ್’ ಚಾಲೆಂಜ್ನ ಅಪಾಯಗಳ ಬಗ್ಗೆ ವೈದ್ಯರು ಎಚ್ಚರಿಸಿದ್ದರು. ಇದರ ಬೆನ್ನಿಗೇ ಟಿಕ್ಟಾಕ್ ಕಂಪನಿ ಕೂಡ ಅಂತ ವಿಡಿಯೊಗಳನ್ನು ತನ್ನ ವೇದಿಕೆಯಲ್ಲಿ ಕೆದಕಿ ತೆಗೆದು ಡಿಲೀಟ್ ಮಾಡಿದೆ.
ಈ ಸಾಮಾಜಿಕ ಮಾಧ್ಯಮದ ಹುಚ್ಚಾಟದಿಂದ ಮಿಲ್ಕ್ ಕ್ರೇಟ್ಗಳನ್ನು ಹತ್ತುವ ಆತುರದಲ್ಲಿ ಹಲವರು ಬಿದ್ದು ಬೆನ್ನುಮೂಳೆ ಮುರಿದುಕೊಂಡಿದ್ದಾರೆ. ಕೈಕಾಲುಗಳಿಗೆ ಗಂಭೀರವಾಗಿ ಪೆಟ್ಟಾಗಿದೆ. ಪಿರಮಿಡ್ ಮಾದರಿಯಲ್ಲಿ ಪ್ಲಾಸ್ಟಿಕ್ ಕ್ರೇಟ್ಗಳನ್ನು ಜೋಡಿಸಿಟ್ಟು ಅದರ ಮೇಲೆ ಏರುವ ಹುಚ್ಚಾಟವೇ ಈ ‘ಮಿಲ್ಕ್ ಕ್ರೇಟ್ ಚಾಲೆಂಜ್’.
ಕಳ್ಳನಿಗೆ ಪತಿಯಿಂದ ಗೂಸಾ…! ವಿಡಿಯೋ ರೆಕಾರ್ಡ್ ಮಾಡಿ ಶೇರ್ ಮಾಡಿಕೊಂಡ ಪತ್ನಿ
ಅಪಾಯಕಾರಿ ಕೃತ್ಯಗಳಿಹೆ ಪ್ರಚೋದನೆ ನೀಡುವುದನ್ನು ಟಿಕ್ಟಾಕ್ ಸಹಿಸಲ್ಲ. ನಮ್ಮ ಸಮುದಾಯ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಇದಾಗಿದೆ ಎಂದು ಕಂಪನಿ ಕೂಡ ಪ್ರಕಟಣೆಯಲ್ಲಿ ತಿಳಿಸಿದೆ.