ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಳ್ವಿಕೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ತಾಲಿಬಾನ್ ತೊರೆಯಲು ಮುಂದಾಗಿರುವ ಜನರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪುವ ಜನರು ಹಸಿವು, ಬಾಯಾರಿಕೆಯಿಂದ ಸಾವನ್ನಪ್ಪುತ್ತಿದ್ದಾರೆ.
ವಿಮಾನ ನಿಲ್ದಾಣದ ಹೊರಗೆ ಆಹಾರ ಮತ್ತು ಪಾನೀಯದ ಬೆಲೆ ಗಗನಕ್ಕೇರಿದೆ. ಅಂಗಡಿಯವರು ಅಫ್ಘಾನಿಸ್ತಾನ್ ಕರೆನ್ಸಿಯ ಬದಲಾಗಿ ಡಾಲರ್‌ಗಳನ್ನು ಬೇಡುತ್ತಿದ್ದಾರೆ. ಅಮೆರಿಕನ್ ಮತ್ತು ಬ್ರಿಟಿಷ್ ಸೈನಿಕರು ಅಫ್ಘಾನರಿಗೆ ಸಹಾಯ ಮಾಡುತ್ತಿದ್ದಾರೆ. ಆದ್ರೆ ಪ್ರತಿಯೊಬ್ಬ ವ್ಯಕ್ತಿಗೂ ಆಹಾರ, ನೀರು ನೀಡುವುದು ಕಷ್ಟವಾಗಿದೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನೀರಿನ ಬಾಟಲಿಯ ಬೆಲೆ 40 ಡಾಲರ್ ತಲುಪಿದೆ. ಅಂದ್ರೆ ಸುಮಾರು 3000 ರೂಪಾಯಿಯಾಗಿದೆ. ಒಂದು ಪ್ಲೇಟ್ ಅನ್ನದ ಬೆಲೆ 100 ಡಾಲರ್ ಏರಿದೆ. ಅಂದ್ರೆ ಸುಮಾರು 7500 ರೂಪಾಯಿಗಳನ್ನು ನೀಡಬೇಕಾಗಿದೆ.
ಯುಎಸ್, ಕಳೆದ ಹತ್ತು ದಿನಗಳಲ್ಲಿ 70,700 ಜನರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಿದೆ. ಇದರ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯ ಆಫ್ಘನ್ನರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇನ್ನೂ ಸಿಲುಕಿಕೊಂಡಿದ್ದಾರೆ. ವಿಮಾನ ನಿಲ್ದಾಣ ಹೊರಗೆ ತಾಲಿಬಾನಿಗಳು ಸುತ್ತುವರೆದಿದ್ದಾರೆ. ವಿಮಾನ ನಿಲ್ದಾಣಕ್ಕೆ ಅವರು ಬರದಂತೆ ತಡೆಯಲಾಗ್ತಿದೆ.