ಇನ್ಫೋಸಿಸ್ ಮತ್ತೊಂದು ದಾಖಲೆ ಬರೆದಿದೆ. ಮಂಗಳವಾರ ಇನ್ಫೋಸಿಸ್ ಷೇರು ಬೆಲೆ ದಾಖಲೆ ಮಟ್ಟವನ್ನು ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಕ್ಯಾಪ್, 100 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ 100 ಬಿಲಿಯನ್ ಡಾಲರ್ಗಳ ಎಂ ಕ್ಯಾಪ್ ಹೊಂದಿರುವ ನಾಲ್ಕನೇ ಭಾರತೀಯ ಕಂಪನಿಯಾಗಿ ಇನ್ಫೋಸಿಸ್ ಹೊರಹೊಮ್ಮಿದೆ.
ಬಿಎಸ್ಇಯಲ್ಲಿ ಕಂಪನಿಯ ಷೇರು ಬೆಲೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 1,755.60 ರೂಪಾಯಿಯಾಗಿತ್ತು. ಇದು ಕಂಪನಿಯ ಮಾರುಕಟ್ಟೆ ಕ್ಯಾಪ್ ಅನ್ನು 7.44 ಲಕ್ಷ ಕೋಟಿಗೆ ತಲುಪಿಸಲು ನೆರವಾಯ್ತು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾರುಕಟ್ಟೆ ಕ್ಯಾಪ್ 140 ಬಿಲಿಯನ್ ಡಾಲರ್. ಇದು ಭಾರತದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದರ ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ಇದೆ. ಕಂಪನಿಯ ಮಾರುಕಟ್ಟೆ ಕ್ಯಾಪ್ ಸುಮಾರು 115 ಬಿಲಿಯನ್ ಡಾಲರ್. ಮೂರನೇ ಸ್ಥಾನದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಇದ್ದು,ಅದರ ಮಾರುಕಟ್ಟೆ ಮೌಲ್ಯಮಾಪನವು 100.1 ಬಿಲಿಯನ್ ಡಾಲರ್.
ಕಳೆದ ಕೆಲವು ವರ್ಷಗಳಲ್ಲಿ, ಇನ್ಫೋಸಿಸ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ.