ಅನ್ನ ಈಗಾಗಲೇ ಮಾಡಿಯಾಗಿದೆ. ಮತ್ತೊಮ್ಮೆ ಅನ್ನ ಮಾಡಲು ಯಾಕೆ ಇಟ್ಟಿದ್ದೀಯಾ ಎಂದು ಅತ್ತೆ ಕೇಳಿದ್ದೆ ತಪ್ಪಾಗಿದೆ. ಇದರಿಂದ ಕೋಪಗೊಂಡ ಸೊಸೆ ಗಂಜಿಯನ್ನು ಅತ್ತೆ ತಲೆ ಮೇಲೆ ಸುರಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಸಾಗರ ತಾಲೂಕಿನ ಮುಳ್ಳಕೆರೆ ನಿವಾಸಿ ಪಾರ್ವತಮ್ಮ ಎಂಬವರ ತಲೆ ಮೇಲೆ ತಮ್ಮ ಸೊಸೆ ನೇತ್ರಾ ಗಂಜಿ ಸುರಿದ ಪರಿಣಾಮ ತೀವ್ರ ಸುಟ್ಟ ಗಾಯಗಳಿಂದ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಲೆ ಶುರುವಾದ ಬೆನ್ನಲ್ಲೇ ತಜ್ಞರಿಂದ ಶಾಕಿಂಗ್ ನ್ಯೂಸ್: ಅಕ್ಟೋಬರ್ ನಲ್ಲಿ ಕೊರೋನಾ ಮೂರನೇ ಅಲೆ ಅಟ್ಟಹಾಸ –ಮಕ್ಕಳೇ ಟಾರ್ಗೆಟ್
ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.