ಅಫ್ಘಾನಿಸ್ತಾನವನ್ನು ಮರುವಶ ಮಾಡಿಕೊಂಡು ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿರುವ ತಾಲಿಬಾನ್ ಇದೀಗ ರಾಜಸ್ಥಾನದಲ್ಲೂ ವಿವಾದ ಸೃಷ್ಟಿಸಿದೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಭನಿಯಾನಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಯೊಂದರಲ್ಲಿ ’ತಾಲಿಬಾನ್’ ಹೆಸರಿನ ತಂಡವೊಂದು ಭಾಗವಹಿಸಿ ಭಾರೀ ವಿವಾದ ಸೃಷ್ಟಿಸಿದೆ.
ಭೋಜ್ಪುರಿ ನಟಿಯ ಬೆತ್ತಲೆ ವಿಡಿಯೋ ವೈರಲ್
ಪೋಖರಣ್‌ನಿಂದ 36 ಕಿಮೀ ದೂರದಲ್ಲಿರುವ ಗ್ರಾಮವೊಂದರಲ್ಲಿ ಈ ಘಟನೆ ಜರುಗಿದೆ. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಈ ಊರಿನಲ್ಲಿ ಭಾರತೀಯ ಸೇನೆಯ ಫೈರಿಂಗ್ ರೇಂಜ್ ಇದ್ದು, ತುಕಡಿಗಳು ನಿರಂತರವಾಗಿ ಈ ಪ್ರದೇಶದ ಮೂಲಕ ಹಾದು ಹೋಗುತ್ತಿರುವ ಕಾರಣ ಭಾರೀ ಮಹತ್ವ ಪಡೆದಿದೆ.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಟೂರ್ನಿಯ ಆಯೋಜಕರು ’ತಾಲಿಬಾನ್’ ಹೆಸರಿನ ತಂಡವನ್ನು ತಪ್ಪಾಗಿ ಸೇರಿಸಿಕೊಂಡಿದ್ದು, ಕೂಟದಿಂದ ಅವರನ್ನು ಕೈಬಿಡಲಾಗಿದೆ ಎಂದಿದೆ. ಆನ್ಲೈನ್ ಸ್ಕೋರಿಂಗ್ ವ್ಯವಸ್ಥೆಯಲ್ಲಿ ಆದ ಪ್ರಮಾದದಿಂದ ಹೀಗೆ ಆಗಿದೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಆಫ್ಘನ್ ಬಿಕ್ಕಟ್ಟಿನಿಂದ ಭಾರತದಲ್ಲಿ ಡ್ರೈಫ್ರೂಟ್ಸ್ ಬೆಲೆಗಳಲ್ಲಿ ಏರಿಕೆ…..! ಗ್ರಾಹಕರ ಜೇಬಿಗೆ ಬರೆ
ಕೂಟದ ವ್ಯವಸ್ಥಾಪಕರು ಗ್ರಾಮಸ್ಥರ ಪರವಾಗಿ ಈ ಕುರಿತು ಕ್ಷಮೆಯಾಚಿಸಿದ್ದು, ಈ ರೀತಿಯ ಘಟನೆ ಮುಂದೆ ಮರುಕಳಿಸುವುದಿಲ್ಲ ಎಂದಿದ್ದಾರೆ.