ಸಂಘರ್ಷಪೀಡಿತ ಕಾಬೂಲ್ನಿಂದ 87 ಮಂದಿ ಭಾರತೀಯರು ಹಾಗೂ ಇಬ್ಬರು ನೇಪಾಳಿಯರನ್ನು ತಜಕಿಸ್ತಾನ ರಾಜಧಾನಿ ದುಶಾಂಬೆ ಮೂಲಕ ದೆಹಲಿಗೆ ಹೊತ್ತು ತಂದ ಏರ್ ಇಂಡಿಯಾ ವಿಮಾನ ಭಾನುವಾರ ಬೆಳಗ್ಗಿನ ಜಾವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ದೆಹಲಿಗೆ ಬಂದು ಲ್ಯಾಂಡ್ ಆಗುತ್ತಲೇ ಭಾವುಕರಾದ ಮಂದಿ ವಿಮಾನದಲ್ಲೇ, “ಭಾರತ್ ಮಾತಾ ಕಿ ಜೈ,” ಘೋಷಣೆಗಳನ್ನು ಕೂಗಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚಿನ ಹೀರೋಯಿನ್ ಯಾರು ಗೊತ್ತಾ…?
ದುಶಾಂಬೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಇಂಥ ಇನ್ನಷ್ಟು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.
ಕಾಬೂಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಅಲ್ಲಿನ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ ಎರಡು ವಿಮಾನಗಳನ್ನು ಕಾರ್ಯಾಚರಿಸಲು ಅಮೆರಿಕನ್ ಹಾಗೂ ನ್ಯಾಟೋ ಪಡೆಗಳು ಅನುಮತಿ ನೀಡಿವೆ.
https://twitter.com/ANI/status/1429178823199760389?ref_src=twsrc%5Etfw%7Ctwcamp%5Etweetembed%7Ctwterm%5E1429178823199760389%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Findia%2Farticle%2Fjubilant-indian-evacuees-from-kabul-chant-bharat-mata-ki-jai-as-plane-lands-in-new-delhi-watch%2F802064