ಮಲೇಷ್ಯಾದ ನಿವಾಸವೊಂದರ ಮುಂದಿನ ಗೇಟನ್ನು ದೊಡ್ಡ ಗಾತ್ರದ ಉಡವೊಂದು ಹತ್ತಿ ನಿಂತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ತಲೆಹರಟೆಗಳು ಮಾತ್ರ ಈ ಫೋಟೊವನ್ನು ಕೂಡ ತಮ್ಮ ಕ್ರಿಯಾಶೀಲತೆ ತೋರಿಸಲು ಬಳಸಿಕೊಂಡು ಮೀಮ್ಸ್ ಮಾಡಿದ್ದಾರೆ.
ದಿವ್ಯಾಂಗರಿಗೆ ವರದಾನವಾಗಿದೆ ಮೋಟಾರ್ ಸೈಕಲ್ ವ್ಹೀಲ್ಚೇರ್
‘ ಆಂಟಿ, ನಮ್ಮ ಬಾಲ್ ಕೊಡಿ. ಮತ್ತೊಮ್ಮೆ ಗೇಟಿನ ಒಳಗಡೆ ಹೊಡೆಯಲ್ಲ’ ಎಂದು ಸಣ್ಣವಯಸ್ಸಿನಲ್ಲಿ ಮಕ್ಕಳು ಕ್ರಿಕೆಟ್ ಆಡುವಾಗ ಪಕ್ಕದ ಮನೆಯವರ ಗೇಟ್ ಮುಂದೆ ಗೋಗರೆಯುತ್ತಿದ್ದಂತೆ ಫೋಟೊ ಕೆಳಗೆ ಅಡಿಬರಹ ಹಾಕಿದ್ದಾರೆ.
ಅಂದ ಹಾಗೇ, ಫೋಟೊವನ್ನು ಕ್ಲಿಕ್ಕಿಸಿದವರು ಲಾಂಗ್ ಛೆಂರ್ಗ್ ಯೀ ಅವರು. ʼನಿಮ್ಮ ಮನೆ ಎದುರು ಸಾಕು ನಾಯಿಗಳು, ಬೀದಿ ನಾಯಿಗಳು ಕಂಡಿರಬಹುದು, ಆದರೆ ನಮ್ಮ ಮನೆ ಮುಂದೆ ದೊಡ್ಡ ಹಲ್ಲಿ ಇದೆ ನೋಡಿʼ ಎಂದು ಫೋಟೊ ಹಂಚಿಕೊಂಡಿದ್ದಾರೆ. ‘ಮಿನಿ ಗಾಡ್ಜಿಲ್ಲಾ’ ಎಂದು ಕೂಡ ಉಡವನ್ನು ಕರೆದಿದ್ದಾರೆ.
https://www.facebook.com/cherngyee.long/posts/2827409103953376