ಬೆಂಗಳೂರಿನಲ್ಲಿ ಚಿಂದಿ ಆಯುವ ಮಹಿಳೆಯ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಸೆಸಿಲಿಯಾ ಎಂಬ ಹೆಸರಿನ ಭಿಕ್ಷುಕಿ ಸುಲಲಿತವಾಗಿ ಇಂಗ್ಲೀಷ್ನಲ್ಲಿ ಮಾತನಾಡಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶಾಚಿನಾ ಹೆಗ್ಗಾರ್ ಎಂಬವರು ಶೇರ್ ಮಾಡಿದ್ದಾರೆ.
ಪ್ರಿಯತಮೆಗೆ ಉಡುಗೊರೆ ಕೊಡಲು ದರೋಡೆಗಿಳಿದ ಯುವಕ
ಬೆಂಗಳೂರಿನ ಬೀದಿಯೊಂದರಲ್ಲಿ ಸೆಸಿಲಿಯಾರನ್ನ ಭೇಟಿಯಾದ ಶಾಚಿನಾ 2 ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ ಈಕೆ ತನ್ನನ್ನು ಪರಿಚಯಿಸಿಕೊಂಡು ದೇವರ ಹಾಡನ್ನು ಹಾಡಿದ್ದಾಳೆ. ಹೆಗ್ಗಾರ್ ಸಿಸಿಲಿಯಾ ಬಳಿ ನೀವು ಒಬ್ಬಂಟಿಯಾಗಿದ್ದೀರೆ ಎಂದು ಕೇಳಿದ ತಕ್ಷಣ ಸಿಸಿಲಿಯಾ ಮೇರಿ ದೇವರ ಫೋಟೋ ತೋರಿಸಿ ನಾನೆಂದಿಗೂ ಒಬ್ಬಂಟಿಯಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.
https://www.youtube.com/watch?v=57ORQ3J9fI8