ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿ ಹಾಗೂ ಓರ್ವ ನಾಗರಿಕ ಸಿನಿಮೀಯ ರೀತಿಯಲ್ಲಿ ಪಾರು ಮಾಡಿದ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ. ರೈಲು ಹಳಿಗೆ ಎಂಟ್ರಿ ಕೊಡೋದರ ಒಳಗಾಗಿ ಪೊಲೀಸ್ ಹಾಗೂ ಪ್ರಯಾಣಿಕ ವ್ಯಕ್ತಿಯ ಜೀವ ಕಾಪಾಡುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಈ ಘಟನೆಯ ದೃಶ್ಯಾವಳಿಗಳನ್ನು ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಈ ವಿಡಿಯೋದಲ್ಲಿ ವ್ಯಕ್ತಿಯು ಸಬ್ವೇ ಟ್ರ್ಯಾಕ್ನಲ್ಲಿ ಬಿದ್ದಿದ್ದ. ಕೂಡಲೇ ಆ ಸ್ಥಳಕ್ಕೆ ಬಂದ ನ್ಯೂಯಾರ್ಕ್ ಪೊಲೀಸ್ ಅಧಿಕಾರಿ ಹಳಿಯ ಕಡೆಗೆ ಇಳಿದಿದ್ದಾನೆ. ಇದರ ಜೊತೆಗೆ ಇನ್ನೊಬ್ಬ ವ್ಯಕ್ತಿ ಕೂಡ ಹಳಿಗೆ ಇಳಿದು 60 ವರ್ಷದ ವ್ಯಕ್ತಿಯನ್ನು ಕಾಪಾಡುವಲ್ಲಿ ನೆರವಾಗಿದ್ದಾನೆ. ಇವರಿಬ್ಬರು ಆ ವ್ಯಕ್ತಿಯನ್ನು ಕಾಪಾಡಿ ಹಳಿಯಿಂದ ಮೇಲಕ್ಕೆ ಜಂಪ್ ಮಾಡುತ್ತಿದ್ದಂತೆಯೇ ರೈಲು ಅದೇ ಹಳಿಯಿಂದ ಹಾದು ಹೋಗಿದೆ. ಹಳಿಯ ಮೇಲೆ ಬಿದ್ದಿದ್ದ ವೃದ್ಧನನ್ನು ಜೆಸ್ಸಿ ಬ್ರ್ಯಾಂಚ್ ಎಂದು ಗುರುತಿಸಲಾಗಿದೆ. ಪ್ರಜ್ಞೆ ತಪ್ಪಿ ಇವರು ಹಳಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ.
https://www.instagram.com/p/CSwdT_8lREF/?utm_source=ig_web_copy_link