alex Certify ಮನೆಯಲ್ಲಿರುವ ವಸ್ತು ಬಳಸಿ ತಯಾರಿಸಿ ರೂಮ್​ ಫ್ರೆಶ್ನರ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿರುವ ವಸ್ತು ಬಳಸಿ ತಯಾರಿಸಿ ರೂಮ್​ ಫ್ರೆಶ್ನರ್…​..!

ಎಲ್ಲರಿಗೂ ತಮ್ಮ ಮನೆಯ ವಾತಾವರಣ ಫ್ರೆಶ್​ ಆಗಿ ಸುಗಂಧಭರಿತವಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿ ವಾತಾವರಣ ಇದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.

ಇದಕ್ಕಾಗಿ ಅನೇಕರು ಮಾರುಕಟ್ಟೆಗಳಲ್ಲಿ ಸಿಗುವ ರೂಮ್​ ಫ್ರೆಶ್ನರ್​ಗಳು ಹಾಗೂ ಪರ್ಫ್ಯುಮ್​ಗಳನ್ನು ಬಳಕೆ ಮಾಡುತ್ತಾರೆ. ಆದರೆ ಇದರಿಂದ ಸಿಗುವ ಪರಿಮಳವು ಹೆಚ್ಚು ಕಾಲ ಇರೋದಿಲ್ಲ. ಹೀಗಾಗಿ ಸುಗಂಧವನ್ನು ಕಾಪಾಡಿಕೊಳ್ಳಲು ನೀವು ಪದೇ ಪದೇ ರೂಮ್​ ಫ್ರೆಶ್ನರ್​ಗಳನ್ನು ಬಳಕೆ ಮಾಡುತ್ತಲೇ ಇರಬೇಕು. ಆದರೆ ನೀವು ಮಾರುಕಟ್ಟೆಯಲ್ಲಿ ಹಣವನ್ನು ವ್ಯರ್ಥ ಮಾಡದೇ ಮನೆಯಲ್ಲೇ ಇರುವ ವಸ್ತುಗಳನ್ನು ಬಳಕೆ ಮಾಡಿ ದೀರ್ಘ ಕಾಲದ ಸುಗಂಧ ಮನೆಯಲ್ಲಿ ನೆಲೆಸುವಂತೆ ಮಾಡಬಹುದು.

ಇದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ. ಬೆಳಗ್ಗೆ ಎದ್ದ ಕೂಡಲೇ ಮನೆಯ ಗಾರ್ಡನ್​ನಲ್ಲಿ ಸಿಗುವ ಗುಲಾಬಿ ಹೂವುಗಳನ್ನ ಕೊಯ್ದು ಅದರ ಪಕಳೆಗಳನ್ನು ಒಂದು ಗಾಜಿನ ಪಾತ್ರೆಗೆ ಹಾಕಿ. ಇದಕ್ಕೆ ಸ್ವಚ್ಛವಾದ ನೀರನ್ನು ಹಾಕಿ. ಇದನ್ನು ಗಾಳಿ ಸರಿಯಾಗಿ ಬರುವ ಜಾಗದಲ್ಲಿ ಇರಿಸಿ. ಈ ರೀತಿ ಮಾಡೋದ್ರಿಂದ ಇಡೀ ದಿನ ನಿಮ್ಮ ಮನೆಯಲ್ಲಿ ಗುಲಾಬಿ ಹೂವಿನ ಸುಗಂಧ ಪಸರಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...