ಕೊರೊನಾದಿಂದಾಗಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರ ಆದಾಯ ಕಡಿಮೆಯಾಗಿದೆ. ಹೆಚ್ಚುವರಿ ಹಣ ಗಳಿಕೆಗೆ ಜನರು ಸ್ವಂತ ಉದ್ಯೋಗ ಶುರು ಮಾಡುವ ಯೋಜನೆ ರೂಪಿಸುತ್ತಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಗಳಿಸುವ ಉದ್ಯೋಗದಲ್ಲಿ ಹಪ್ಪಳದ ಉದ್ಯೋಗ ಕೂಡ ಒಂದು.
ಇದ್ರಲ್ಲಿ ಕೇವಲ 2 ಲಕ್ಷ ರೂಪಾಯಿಗೆ ವ್ಯಾಪಾರ ಶುರು ಮಾಡಿ, ಪ್ರತಿ ತಿಂಗಳು 1 ಲಕ್ಷ ರೂಪಾಯಿವರೆಗೆ ಹಣ ಗಳಿಸಬಹುದಾಗಿದೆ. 2 ಲಕ್ಷ ರೂಪಾಯಿ ಹಣವಿದ್ದರೆ ಸುಲಭವಾಗಿ ವ್ಯವಹಾರ ಶುರು ಮಾಡಬಹುದು. ಒಂದು ವೇಳೆ ಹಣವಿಲ್ಲವೆಂದ್ರೆ, ಸರ್ಕಾರದಿಂದ ಸಾಲ ಪಡೆಯಬಹುದು. ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಪ್ರಕಾರ, ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು.
BIG NEWS: ಮಿತಿ ಮೀರಿದ ಅಧಿಕಾರಿಗಳ ಲಂಚಾವತಾರ; ಕಂದಾಯ ಸಚಿವರಿಗೆ ಪತ್ರ ಬರೆದ ಜಗದೀಶ್ ಶೆಟ್ಟರ್
ಒಟ್ಟು 6 ಲಕ್ಷ ರೂಪಾಯಿಗಳ ಹೂಡಿಕೆಯೊಂದಿಗೆ, ಸುಮಾರು 30 ಸಾವಿರ ಕೆಜಿ ಉತ್ಪಾದನಾ ಸಾಮರ್ಥ್ಯ ಸಿದ್ಧವಾಗಲಿದೆ. ಈ ಸಾಮರ್ಥ್ಯಕ್ಕೆ 250 ಚದರ ಮೀಟರ್ ಸ್ಥಳ ಬೇಕಾಗುತ್ತದೆ. ಈ ವ್ಯವಹಾರವನ್ನು ಆರಂಭಿಸಲು, 6.05 ಲಕ್ಷ ರೂಪಾಯಿ ಖರ್ಚು ಬರುತ್ತದೆ. ಸ್ಥಿರ ಬಂಡವಾಳದಲ್ಲಿ ಎರಡು ಯಂತ್ರಗಳು, ಪ್ಯಾಕೇಜಿಂಗ್ ಯಂತ್ರಗಳು, ಉಪಕರಣಗಳಂತಹ ಎಲ್ಲಾ ವೆಚ್ಚ ಒಳಗೊಂಡಿದೆ. ಇದರಲ್ಲಿ 3 ತಿಂಗಳ ಸಿಬ್ಬಂದಿಯ ಸಂಬಳ, ಕಚ್ಚಾವಸ್ತು ಮತ್ತು ಯುಟಿಲಿಟಿ ಉತ್ಪನ್ನ ವೆಚ್ಚ ಸೇರಿದೆ. ಬಾಡಿಗೆ, ವಿದ್ಯುತ್, ನೀರು, ದೂರವಾಣಿ ಬಿಲ್ ಮುಂತಾದ ವೆಚ್ಚಗಳನ್ನು ಕೂಡ ಇದರಲ್ಲಿ ಸೇರಿಸಲಾಗಿದೆ.
ನಿಮ್ಮ ಬಳಿ ಸ್ವಂತ ಸ್ಥಳವಿಲ್ಲದೆ ಹೋದ್ರೆ ನೀವು ಬಾಡಿಗೆ ಪಡೆಯಬಹುದು. ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ಪಾವತಿಸಬೇಕಾಗುತ್ತದೆ. 3 ಕೌಶಲ್ಯರಹಿತ ಕಾರ್ಮಿಕ, 2 ನುರಿತ ಕಾರ್ಮಿಕ ಮತ್ತು ಒಬ್ಬ ಮೇಲ್ವಿಚಾರಕರನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅವರ ಸಂಬಳಕ್ಕೆ 25,000 ರೂಪಾಯಿ ಖರ್ಚು ಬರಲಿದೆ. ನೀವು ತಯಾರಿಸುವ ಹಬ್ಬಳಕ್ಕೆ ಸರಿಯಾದ ಮಾರುಕಟ್ಟೆ ಒದಗಿಸಿಕೊಂಡಲ್ಲಿ ತಿಂಗಳಿಗೆ ಕೈತುಂಬ ಹಣ ಗಳಿಸಬಹುದು.