ಬ್ಯಾಂಕ್ ಗಳು ಅನೇಕ ಸೌಲಭ್ಯಗಳನ್ನು ನೀಡ್ತಿವೆ. ಆದ್ರೆ ಗ್ರಾಹಕರಿಗೆ ಇದ್ರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಹೂಡಿಕೆ ಬಗ್ಗೆ ಪ್ಲಾನ್ ಮಾಡ್ತಿರುವ ಜನರು, ಎಫ್ ಡಿ ಮೂಲಕ ಸಣ್ಣ ಪ್ರಮಾಣದಲ್ಲಿ ಹಣ ಗಳಿಸಬಹುದು. ಬ್ಯಾಂಕ್ ಎಫ್ಡಿ ಮೂಲಕ ಕೇವಲ 6 ತಿಂಗಳಲ್ಲಿ, ಹಣ ಗಳಿಸಬಹುದು. ಬ್ಯಾಂಕ್, ಎಫ್ಡಿ ಸೌಲಭ್ಯವನ್ನು ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ನೀಡುತ್ತದೆ.
ಎಸ್ಬಿಐ, ಪಿಎನ್ಬಿ, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಐಸಿಐಸಿಐ ನಂತಹ ದೊಡ್ಡ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6 ತಿಂಗಳು ಎಫ್ಡಿ ಮಾಡಿದರೆ,ಶೇಕಡಾ 3.90ರ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು. ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡಾ 4.40 ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತದೆ.
ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಶೇಕಡಾ 3ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತಿದೆ. 6 ತಿಂಗಳ ಎಫ್ಡಿಯಲ್ಲಿ, ಬ್ಯಾಂಕ್ ಸಾಮಾನ್ಯ ನಾಗರಿಕರು ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3 ಬಡ್ಡಿಯನ್ನು ನೀಡುತ್ತಿದೆ.
ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್, ಎಚ್ಡಿಎಫ್ಸಿ, ಸಾಮಾನ್ಯ ನಾಗರಿಕರು ಇಲ್ಲಿ ಶೇಕಡಾ 3.50 ದರದಲ್ಲಿ ಬಡ್ಡಿ ನೀಡ್ತಿದೆ. ಹಿರಿಯ ನಾಗರಿಕರು ಶೇಕಡಾ 4ರ ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ 6 ತಿಂಗಳ ಕಾಲ ಸ್ಥಿರ ಠೇವಣಿಗಳ ಮೇಲೆ ಶೇಕಡಾ 4ರ ಬಡ್ಡಿಯ ಲಾಭವನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇಕಡಾ 4.50 ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ.
ಕೆನರಾ ಬ್ಯಾಂಕ್ ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 4ರ ದರದಲ್ಲಿ ಬಡ್ಡಿ ನೀಡ್ತಿದೆ.