ಅಫ್ಘಾನಿಸ್ತಾನವು ತಾಲಿಬಾನ್ ತೆಕ್ಕೆಗೆ ಬೀಳುತ್ತಲೇ ಗಾಬರಿ ಮಿಶ್ರಿತ ಗೊಂದಲಗಳ ಗೂಡಾಗಿರುವ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನಾವಳಿಗಳ ಬಗ್ಗೆ ಮೂರು ದಿನಗಳಿಂದ ವರದಿಗಳು ಬರುತ್ತಲೇ ಇವೆ.
ಇಂಥದ್ದೇ ಒಂದು ಘಟನೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದ ರೇಜ಼ರ್ ವೈರ್ ಬೇಲಿಯಿಂದ ಒಳಗೆ ತಮ್ಮ ಕಂದಮ್ಮಗಳನ್ನು ಎಸೆಯುತ್ತಿರುವ ಮಹಿಳೆಯರ ಚಿತ್ರವೊಂದು ವೈರಲ್ ಆಗಿದೆ.
ಸ್ಕೈ ನ್ಯೂಸ್ ಪ್ರತಿನಿಧಿ ಸ್ಟಿವರ್ಟ್ ರಾಮ್ಸೇ ಜೊತೆಗೆ ಮಾತನಾಡಿದ ಬ್ರಿಟಿಷ್ ಹಿರಿಯ ಅಧಿಕಾರಿಯೊಬ್ಬರು, “ಅದು ಭಯಾನಕ, ಮಹಿಳೆಯರು ತಮ್ಮ ಮಕ್ಕಳನ್ನು ರೇಜ಼ರ್ ವೈರ್ ಮೇಲಿಂದ ಎಸೆದು ಅವುಗಳಣ್ನು ಎತ್ತಿಕೊಳ್ಳಲು ಬ್ರಿಟಿಷ್ ಸೈನಿಕರಿಗೆ ಕೇಳಿಕೊಳ್ಳುತ್ತಿದ್ದಾರೆ. ಕೆಲ ಮಕ್ಕಳು ವೈರ್‌ಗೆ ಸಿಕ್ಕಿವೆ” ಎಂದು ವಿವರಿಸಿದ್ದಾರೆ.
ಪ್ರಭಾಸ್ ರನ್ನು ಕನ್ನಡಕ್ಕೆ ಕರೆತಂದ ʼಕೆಜಿಎಫ್ʼ ಟೀಂ
ತಾಲಿಬಾನ್ ರಕ್ಕಸರ ಕೈಯಲ್ಲಿ ಸಿಲುಕಿದ ತಮ್ಮ ದೇಶದಿಂದ ಮೊದಲು ಓಡಿ ಹೋದರೆ ಸಾಕು ಎನ್ನುವಂತಾಗಿರುವ ಅಫ್ಘನ್ನರು ಕುಟುಂಬಗಳ ಸಮೇತ ವಿಮಾನ ನಿಲ್ದಾಣಕ್ಕೆ ಧಾವಿಸಲು ನೋಡುತ್ತಿದ್ದಾರೆ. ಇದೇ ವೇಳೆ ತಾಲಿಬಾನೀ ರಕ್ಕಸರ ಫೈರಿಂಗ್ ಸಹ ಅಲ್ಲಲ್ಲಿ ಆಗುತ್ತಿದ್ದು, ಭಾರೀ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.