
ಭಾರತೀಯ ಸಿನೆಮಾದ ಅತಿ ದೊಡ್ಡ ಆಕ್ಷನ್ ಥ್ರಿಲ್ಲರ್‌ಗಳಲ್ಲಿ ಒಂದಾಗಲಿರುವ ಪ್ರಭಾಸ್ ಅಭಿನಯದ ʼಸಲಾರ್ʼ ಚಿತ್ರ ಭಾರೀ ಸದ್ದು ಮಾಡುತ್ತಿದೆ.
ಕೆಜಿಎಫ್ ನಿದೇರ್ಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಶೃತಿ ಹಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್‌ನ ಎರಡನೇ ಹಂತ ಮುಗಿದಿದ್ದು, ಮುಂದಿನ ಹಂತ ಶೀಘ್ರವೇ ಸೆಟ್ಟೇರಲಿದೆ.
ಸಲಿಂಗಿಳ ಇಮೇಜ್ ಬದಲಿಸಲು ಛಲತೊಟ್ಟು ನಿಂತ ರಾಜಾವಿ
ಈ ಚಿತ್ರವನ್ನು ಕೆಜಿಎಫ್ ಸೀರೀಸ್‌ಗಿಂತ ದೊಡ್ಡದಾಗಿ ಮಾಡಲು ಚಿತ್ರ ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗಿದೆ. ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ಶೂಟಿಂಗ್ ಆಗುತ್ತಿರುವ ಸಲಾರ್ ಅನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು.
ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಮ್ಯೂಸಿಕ್ ಕಾಂಪೋಸ್ ಮಾಡುತ್ತಿದ್ದು, ಭುವನ್ ಗೌಡ ಸಿನಿಮಾಟೋಗ್ರಫಿ ಮಾಡಲಿದ್ದಾರೆ. ಚಿತ್ರದ ಮೂಲಕ ಪ್ರಭಾಸ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತಾಗಲಿದೆ.