ವ್ಯಕ್ತಿಯೊಬ್ಬರ ಆರ್ಥಿಕ ಆರೋಗ್ಯದ ಸೂಚಕವಾದ ಕ್ರೆಡಿಟ್ ಸ್ಕೋರ್, ಬ್ಯಾಂಕುಗಳಿಗೆ ಸಾಲ ವಿತರಿಸುವ ಮುನ್ನ ನಿರ್ದಿಷ್ಟ ಗ್ರಾಹಕನ ವಿಶ್ವಾಸಾರ್ಹತೆ ಎಷ್ಟರ ಮಟ್ಟಿಗೆ ಇದೆ ಎಂದು ತೋರುತ್ತದೆ.
ಸಾಮಾನ್ಯವಾಗಿ 300-900ರ ನಡುವೆ ಬರುವ ಕ್ರೆಡಿಟ್ ಸ್ಕೋರ್ 750+ ಇದ್ದರೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ವಿತ್ತೀಯ ವಿಚಾರಗಳಲ್ಲಿ ಕೆಲವೊಂದು ಜಾಣ ನಡೆಗಳನ್ನು ಇಡುವುದರ ಮೂಲಕ ನೀವೂ ಸಹ ಪಡೆದ ಸಾಲವನ್ನು ಮರಳಿ ಹಿಂದಿರುಗಿಸುವ ವಿಚಾರವಾಗಿ ನಿಮ್ಮ ಬ್ಯಾಂಕ್‌ಗೆ ವಿಶ್ವಾಸ ಹೆಚ್ಚಿಸಬಹುದಾಗಿದೆ.
BREAKING: ಜನಾಶೀರ್ವಾದ ಯಾತ್ರೆ ವೇಳೆ ಅವಘಡ, ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಗಾಯ
1. ಕ್ರೆಡಿಟ್ ಸ್ಕೋರ್‌ಗಳು ಸಾಲಗಾರರು ಪಡೆದ ಸಾಲವನ್ನು ಯಾವ ಮಟ್ಟದಲ್ಲಿ ಹಿಂದಿರುಗಿಸುತ್ತಾರೆ ಎಂಬ ಹಿಸ್ಟರಿ ಮೇಲೆ ನಿಂತಿರುತ್ತದೆ. ಹೀಗಾಗಿ, ಯಾವುದೇ ಸಾಲ ಅಥವಾ ಇಎಂಐಗಳು ಇದ್ದಲ್ಲಿ ಅವನ್ನು ಕಾಲಕಾಲಿಕವಾಗಿ ಪಾವತಿ ಮಾಡುತ್ತಾ ಬರುವುದು ಉತ್ತಮ. ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನಿಗದಿತ ಅವಧಿಯೊಳಗೆ ಪೂರ್ಣವಾಗಿ ಪಾವತಿ ಮಾಡಲಾಗದೇ ಇದ್ದರೂ ಸ್ವಲ್ಪವಾದರೂ ಪಾವತಿ ಮಾಡಿ.
2. ನಿಮಗೆ ಲಭ್ಯವಿರುವ ಕ್ರೆಡಿಟ್ ಮಿತಿಗೆ ಅನುಗುಣವಾಗಿ ಕ್ರೆಡಿಟ್ ಬಳಕೆಯ ಮಟ್ಟವನ್ನು 30%ಗಿಂತ ಕಡಿಮೆ ಇಟ್ಟುಕೊಳ್ಳಿ. ಈ ಅನುಪಾತ ಕಡಿಮೆ ಇದ್ದಷ್ಟೂ ಕ್ರೆಡಿಟ್ ಸ್ಕೋರ್ ವರ್ಧನೆಗೆ ಸಹಕಾರಿಯಾಗಲಿದೆ.
3. ನಿಮ್ಮ ಕ್ರೆಡಿಟ್ ಸ್ಕೋರ್ ಗಳನ್ನು ಆಗಾಗ ಪರಿಶೀಲನೆ ಮಾಡಿಕೊಳ್ಳುತ್ತಿರಿ.
4. ನಿಮ್ಮ ಅತ್ಯಂತ ಹಳೆಯ ಕ್ರೆಡಿಟ್ ಖಾತೆ ಹಾಗೂ ಹೊಸ ಕ್ರೆಡಿಟ್ ಖಾತೆಗಳನ್ನೆಲ್ಲಾ ಒಗ್ಗೂಡಿಸಿ ಎಲ್ಲಾ ಖಾತೆಗಳ ಸರಾಸರಿ ಆಯಸ್ಸನ್ನು ನಿರ್ಧರಿಸಿ ಕ್ರೆಡಿಟ್ ಸ್ಕೋರ್ ನಿಗದಿ ಮಾಡಲಾಗುತ್ತದೆ. ಸರಾಸರಿ ಕ್ರೆಡಿಟ್ ಆಯುಷ್ಯ ಹಳೆಯದಾದಷ್ಟೂ ಕ್ರೆಡಿಟ್ ವರದಿಯಲ್ಲಿ ನಿಮಗೆ ಆರ್ಥಿಕ ಅನುಕೂಲಗಳು ಹೆಚ್ಚು.
5. ಮರುಪಾವತಿ ಮಾಡಲಾಗದೇ ಇರುವ ಸಾಲ ಬಹಳ ಇದ್ದಲ್ಲಿ ಅದು ವ್ಯಕ್ತಿಯೊಬ್ಬರ ಮರುಪಾವತಿ ಕ್ಷಮತೆಯನ್ನು ತಗ್ಗಿಸುತ್ತದೆ.