alex Certify ವಿಶ್ವದ ಟಾಪ್​ 100 ಶ್ರೀಮಂತರ ಪಟ್ಟಿ ಸೇರಿದ ಮತ್ತೊಬ್ಬ ಭಾರತೀಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಟಾಪ್​ 100 ಶ್ರೀಮಂತರ ಪಟ್ಟಿ ಸೇರಿದ ಮತ್ತೊಬ್ಬ ಭಾರತೀಯ

ಹೂಡಿಕೆದಾರ ಹಾಗೂ ಪ್ರಸಿದ್ಧ ಡಿಮಾರ್ಟ್​ ಮಾಲೀಕ ರಾಧಾಕಿಶನ್​ ದಮಾನಿ ವಿಶ್ವದ ಟಾಪ್​ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ.

ಉದ್ಯಮದಲ್ಲಿ ಬೆಳೆಯುತ್ತಿರುವ ದಮಾನಿ ಬ್ಲೂಮ್​​ಬರ್ಗ್​ ಇಂಡೆಕ್ಸ್​​​ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 98ನೇ ಸ್ಥಾನವನ್ನು ಪಡೆದಿದ್ದಾರೆ.

ದಮಾನಿಯನ್ನು ಹೊರತುಪಡಿಸಿ ವಿಶ್ವದ ಟಾಪ್​ 100 ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರಾದ ಮುಕೇಶ್​ ಅಂಬಾನಿ, ಗೌತಮ್​ ಅದಾನಿ, ಅಜೀಂ ಪ್ರೇಮ್​ಜಿ, ಪಲ್ಲೊಂಜಿ ಮಿಸ್ತ್ರಿ, ಶಿವ್​ ನಾದರ್​ ಹಾಗೂ ಲಕ್ಷ್ಮೀ ಮಿತ್ತಲ್​ ಸ್ಥಾನವನ್ನು ಪಡೆದಿದ್ದಾರೆ.

ರಾಧಾಕಿಶನ್​ ದಮಾನಿ ಹಿನ್ನೆಲೆ :

ಮಾರ್ವಾಡಿ ಕುಟುಂಬದಲ್ಲಿ ಜನಿಸಿದ್ದ ದಮಾನಿ ಮುಂಬೈನ 1 ಕೋಣೆಯ ಮನೆಯಲ್ಲಿ ವಾಸವಿದ್ದರು. ಮುಂಬೈ ಯುನಿವರ್ಸಿಟಿಯಲ್ಲಿ ಕಾಮರ್ಸ್ ವಿಭಾಗದಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದ ದಮಾನಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿದ್ದರು.

ದಲಾಲ್​ ಸ್ಟ್ರೀಟ್​ನಲ್ಲಿ ಕೆಲಸ ಮಾಡುತ್ತಿದ್ದ ತಂದೆಯ ನಿಧನದ ಬಳಿಕ ದಮಾನಿ ತಮ್ಮ ಬಾಲ್ ಬೇರಿಂಗ್​ ಉದ್ಯಮವನ್ನು ತ್ಯಜಿಸಿ ಸ್ಟಾಕ್​ ಮಾರ್ಕೆಟ್​ ದಲ್ಲಾಳಿ ಹಾಗೂ ಹೂಡಿಕೆದಾರನಾಗಿ ಉದ್ಯಮ ಆರಂಭಿಸಿದರು.

1992ರಲ್ಲಿ ಹರ್ಷದ್​ ಮೆಹ್ತಾ ಹಗರಣ ಬೆಳಕಿಗೆ ಬಂದ ಬಳಿಕ ಅಲ್ಪ ಮಾರಾಟ ಲಾಭ ಹೊಂದಿದ ದಮಾನಿ ತಮ್ಮ ಆದಾಯದಲ್ಲಿ ಏರಿಕೆ ಕಾಣುತ್ತಾ ಹೋದರು.

2000 ದಲ್ಲಿ ಸ್ಟಾಕ್​ ಮಾರ್ಕೆಟ್​ನಿಂದ ಹೊರಬಂದ ದಮಾನಿ ಡಿಮಾರ್ಟ್​ ಮಾಲೀಕತ್ವವನ್ನು ವಹಿಸಿದರು. 2002ರಲ್ಲಿ ಪೊವಾಲಿಯಲ್ಲಿ ಮೊದಲ ಶಾಖೆ ಆರಂಭಿಸಿದ ದಮಾನಿ 2010ರ ವೇಳೆಗೆ 25 ಅಂಗಡಿಗಳ ಮಾಲೀಕರಾಗಿದ್ದರು. 2017ರ ಬಳಿಕ ಈ ಸೂಪರ್​ ಮಾರ್ಕೆಟ್​ ಗಣನೀಯ ಪ್ರಮಾಣದಲ್ಲಿ ಲಾಭ ಗಳಿಸಿದೆ.

ಪ್ರಸ್ತುತ ದಮಾನಿ ದೇಶದಲ್ಲಿ 6ನೇ ಅತಿ ಹೆಚ್ಚು ಶ್ರೀಮಂತ ಎನಿಸಿಕೊಂಡಿದ್ದಾರೆ. ಇವರ ಪ್ರಸ್ತುತ ಆಸ್ತಿಯು 19.2 ಬಿಲಿಯನ್​ ಡಾಲರ್​ ಮೌಲ್ಯ ಹೊಂದಿದೆ.

ಭಾರತದ ಟಾಪ್​ 10 ಶ್ರೀಮಂತರ ಪಟ್ಟಿ :

ಹೆಸರು                                ಆಸ್ತಿ ಮೌಲ್ಯ
ಮುಕೇಶ್​ ಅಂಬಾನಿ          $82.3 ಬಿಲಿಯನ್

ಗೌತಮ್ ಅದಾನಿ             $ 54.5 ಬಿಲಿಯನ್

ಅಜೀಂ ಪ್ರೇಮ್‌ಜಿ             $ 37.1 ಬಿಲಿಯನ್

ಶಿವ್ ನಾಡಾರ್                $ 28.5 ಬಿಲಿಯನ್

ಲಕ್ಷ್ಮಿ ಮಿತ್ತಲ್                  $ 22.4 ಬಿಲಿಯನ್

ರಾಧಕಿಶನ್ ದಮಾನಿ       $ 19.2 ಬಿಲಿಯನ್

ಉದಯ್ ಕೋಟಕ್          $ 14.8 ಬಿಲಿಯನ್

ಸೈರಸ್ ಪೂನಾವಾಲ       $ 14.3 ಬಿಲಿಯನ್

ದಿಲೀಪ್ ಶಾಂಗ್ವಿ              $ 13.7 ಬಿಲಿಯನ್

ಸಾವಿತ್ರಿ ಜಿಂದಾಲ್           $ 12.8 ಬಿಲಿಯನ್

12.8 ಬಿಲಿಯನ್ ಡಾಲರ್​ ನಿವ್ವಳ ಮೌಲ್ಯದೊಂದಿಗೆ, ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆಯಾಗಿ ಮುಂದುವರಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...