ಕೊರೊನಾ ಹಿನ್ನಲೆಯಲ್ಲಿ ಭಾರತದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸೆಂಟ್ರಲ್ ರೈಲ್ವೆ ಈ ಅವಧಿಯಲ್ಲಿ ಅದ್ಭುತ ಕೆಲಸ ಮಾಡಿ, ಸಾಕಷ್ಟು ಹಣ ಗಳಿಸಿದೆ. ಸೆಂಟ್ರಲ್ ರೈಲ್ವೆ, ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, 2020-21ರಲ್ಲಿ, ಸೆಂಟ್ರಲ್ ರೈಲ್ವೆ ತ್ಯಾಜ್ಯದಿಂದ 391 ಕೋಟಿ ರೂಪಾಯಿ ಗಳಿಸಿದೆ.
ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ತ್ಯಾಜ್ಯವನ್ನು ಮಾರಾಟ ಮಾಡುವ ಮೂಲಕ, ಕೇಂದ್ರ ರೈಲ್ವೆ 391 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆದಾಯ ಗಳಿಸಿದೆ. ಈ ಮೂಲಕ ರೈಲ್ವೆ ಆವರಣವನ್ನು ಸ್ವಚ್ಛಗೊಳಿಸಿದೆ.
ಸೆಂಟ್ರಲ್ ರೈಲ್ವೇ ಶೂನ್ಯ ಸ್ಕ್ರ್ಯಾಪ್ ಮಿಷನ್ ಆರಂಭಿಸಿದೆ. ಇದರ ಅಡಿಯಲ್ಲಿ ಕೇಂದ್ರ ರೈಲ್ವೆಯ ಪ್ರತಿಯೊಂದು ವಿಭಾಗ, ಕಾರ್ಖಾನೆ ಮತ್ತು ಶೆಡ್ ಗಳನ್ನು ಸ್ವಚ್ಛವಾಗಿಡಲಾಗ್ತಿದೆ. ಕೇಂದ್ರ ರೈಲ್ವೆಗೆ ಬೇಡದ ವಸ್ತುಗಳನ್ನು ಇ-ಹರಾಜಿನ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಇದ್ರಿಂದ ರೈಲ್ವೆ ಇಲಾಖೆ 8.65 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಮಾಹಿತಿ ಪ್ರಕಾರ, 2020-21 ರಲ್ಲಿ ಕೇಂದ್ರ ರೈಲ್ವೆ, ತ್ಯಾಜ್ಯದ ಮೂಲಕ ಗಳಿಸಿದ ಮೊತ್ತ, ಕಳೆದ 15 ವರ್ಷಗಳಲ್ಲಿ ಅತಿ ಹೆಚ್ಚು. ಲಾಕ್ಡೌನ್ ಸಮಯದಲ್ಲಿ ಪ್ಯಾಸೆಂಜರ್ ರೈಲು ಓಡಾಡದ ಕಾರಣ ರೈಲ್ವೆ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಇದು ಸಹಾಯ ಮಾಡಿದೆ.