
ಮಾಸ್ಕ್ ಧರಿಸುವುದು ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂಥ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಸೋಂಕು ಹಬ್ಬಿಸುವ ಬೇಜವಾಬ್ದಾರಿ ಮಂದಿಯ ವರ್ತನೆಗಳ ವಿಡಿಯೋಗಳನ್ನು ಬಹಳಷ್ಟು ನೋಡಿದ್ದೇವೆ.
ಇಂಥ ಒಬ್ಬ ಮಾಸ್ಕ್ ವಿರೋಧಿಯೊಬ್ಬ ನ್ಯೂಯಾರ್ಕ್‌ನ ಸಬ್‌ವೇಯಲ್ಲಿ ಅಸಹನೀಯ ವರ್ತನೆಯಲ್ಲಿ ಭಾಗಿಯಾಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಾಸ್ಕ್ ಧರಿಸಿದ್ದ ಹಿರಿಯ ಮಹಿಳೆಯೊಬ್ಬರನ್ನು ಮಾಸ್ಕ್ ತೆರೆಯಲು ಬಲವಂತ ಮಾಡುತ್ತಿರುವ ಈತನ ವರ್ತನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ.