ನೀವು ಚೆಕ್ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸುವವರಾಗಿದ್ದರೆ ಮೊದಲಿಗಿಂತ ಹೆಚ್ಚು ಜಾಗರೂಕರಾಗಿ ಇರಬೇಕು. ಆರ್ಬಿಐ ಬ್ಯಾಂಕಿಂಗ್ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ತಂದಿದೆ. ಆರ್ಬಿಐ ಇನ್ಮುಂದೆ 24 ಗಂಟೆ ಬಲ್ಕ್ ಕ್ಲಿಯರಿಂಗ್ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ. ಇದರ ನೇರ ಪರಿಣಾಮ ನಿಮ್ಮ ಚೆಕ್ ಪಾವತಿ ಮೇಲೆ ಬೀರುತ್ತದೆ. ಅಂದರೆ ಇನ್ಮುಂದೆ ಚೆಕ್ ಕ್ಲಿಯರ್ ಆಗಲು 2 ದಿನಗಳ ಸಮಯ ಬೇಕಾಗೋದಿಲ್ಲ. ಚೆಕ್ನ್ನು ಬ್ಯಾಂಕಿಗೆ ನೀಡುತ್ತಿದ್ದಂತೆಯೇ ಅದರಲ್ಲಿರುವ ಹಣವು ಕ್ಲಿಯರ್ ಆಗಲಿದೆ. ಹೀಗಾಗಿ ಚೆಕ್ ನೀಡುವ ಮುನ್ನ ನೀವು ನಿಮ್ಮ ಖಾತೆಯಲ್ಲಿ ಅಷ್ಟೊಂದು ಹಣ ಇದೆಯೇ ಅನ್ನೋದನ್ನ ಮೊದಲೇ ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು.
ಪ್ರಸ್ತುತ ಚೆಕ್ NACH ವಾರದ 7 ದಿನವೂ ಸೇವೆ ನೀಡಲಿದೆ. ಹೀಗಾಗಿ ನೀವು ಚೆಕ್ ಮೂಲಕ ಪಾವತಿ ಮಾಡುವ ಮುನ್ನ ನಿಮ್ಮ ಖಾತೆಯಲ್ಲಿರುವ ಮೊತ್ತದ ಬಗ್ಗೆ ಜಾಗರೂಕರಾಗಿ ಇರಬೇಕು. ಪ್ರಸ್ತುತ ನಾನ್ ವರ್ಕಿಂಗ್ ದಿನವೂ ಅಂದರೆ ಸಾಪ್ತಾಹಿಕ ರಜೆ ಹಾಗೂ ಸರ್ಕಾರಿ ರಜಾ ದಿನವೂ NACH ಕಾರ್ಯ ನಿರ್ವಹಿಸಲಿದೆ. ಆದ್ದರಿಂದ ನಿಮ್ಮ ಖಾತೆಯಲ್ಲಿ ಹಣ ಇಲ್ಲದೇ ಹೋದಲ್ಲಿ ಚೆಕ್ ಬೌನ್ಸ್ ಆಗಲಿದೆ. ಮೊದಲೆಲ್ಲ ಚೆಕ್ಗೆ ಸಹಿ ಹಾಕಿದ ಬಳಿಕವೂ ಖಾತೆಯಲ್ಲಿ ಹಣ ಹೊಂದಿಸಲು 2 ದಿನಗಳ ಸಮಯಾವಕಾಶ ಇರುತ್ತಿತ್ತು. ಆದರೆ ಈಗ ಚೆಕ್ ಬೌನ್ಸ್ ಭಯ ಮೊದಲಿಗಿಂತ ಹೆಚ್ಚು ಇರಲಿದೆ.
ಏನಿದು NACH..?
ನ್ಯಾಷನಲ್ ಪೇಮೇಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಮೂಲಕ ಬಲ್ಕ್ ಪೇಮೆಂಟ್ ಮಾಡಲಾಗುತ್ತದೆ. ಇದು ಏಕಕಾಲದಲ್ಲಿ ಅನೇಕ ಕ್ರೆಡಿಟ್ ಟ್ರಾನ್ಸ್ಫರ್ ಸೌಕರ್ಯ ನೀಡುತ್ತದೆ. ಇದನ್ನು ಹೊರತುಪಡಿಸಿ, ಸಂಬಳ, ಪಿಂಚಣಿ, ಸಾಲ, ಡಿವಿಡೆಂಟ್ ಸೇರಿದಂತೆ ಅನೇಕ ಪಾವತಿ ಕಾರ್ಯಗಳು ಇದರ ಅಡಿಯಲ್ಲೇ ನಡೆಯುತ್ತದೆ. ಇದು ಎಲೆಕ್ಟ್ರಿಸಿಟಿ, ಗ್ಯಾಸ್, ಟೆಲಿಫೋನ್, ನೀರು, ಸಾಲದ ಬಡ್ಡಿ ಪಾವತಿ, ಬಾಡಿಗೆ, ವಿಮೆ ಸೇರಿದಂತೆ ಸಾಕಷ್ಟು ಪಾವತಿ ಕಾರ್ಯಗಳನ್ನು ಮಾಡುತ್ತದೆ.