ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ತೋರಿದ ಭಾರತೀಯ ಒಲಂಪಿಯನ್‌ಗಳ ಬಗ್ಗೆ ಸ್ವಾತಂತ್ರ‍್ಯೋತ್ಸವದ ಸಂದರ್ಭ ಮೆಚ್ಚಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಭಾರತಕ್ಕೆ ಕೀರ್ತಿ ತಂದ ಒಲಂಪಿಕ್ ಸ್ಪರ್ಧಿಗಳು ಹಾಗೂ ಅಥ್ಲೀಟ್‌ಗಳಿಗೆ ಇಡೀ ದೇಶ ಸಲ್ಯೂಟ್ ಮಾಡಲಿ” ಎಂದಿದ್ದಾರೆ.
“ನಮ್ಮ ಗುರಿಗಳತ್ತ ಕಠಿಣ ಪರಿಶ್ರಮ ಹಾಕಬೇಕು. ನಮಗೆ ವ್ಯರ್ಥ ಮಾಡಲು ಸಮಯವಿಲ್ಲ. ಬದಲಾಗುತ್ತಿರುವ ಜಗತ್ತಿನ ಬೇಡಿಕೆಗಳಿಗೆ ಅನುಸಾರವಾಗಿ ನಮ್ಮನ್ನು ನಾವು ಬದಲಿಸಿಕೊಳ್ಳಬೇಕಿದೆ” ಎಂದು ಅಥ್ಲೀಟ್ ಗಳನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದ್ದಾರೆ.
ತ್ರಿವರ್ಣ ಧ್ವಜಾರೋಹಣ ಮಾಡಿದ ಹಿಜ್ಬುಲ್ ಭಯೋತ್ಪಾದಕನ ತಂದೆ
ಒಲಂಪಿಕ್ ಇತಿಹಾಸದಲ್ಲೇ ತನ್ನ ಬೆಸ್ಟ್ ಪ್ರದರ್ಶನವನ್ನು ಟೋಕಿಯೋದಲ್ಲಿ ನೀಡಿದ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿದಂತೆ ಏಳು ಪದಕಗಳನ್ನು ಗೆದ್ದು ಬಂದಿದೆ.