
ಅದೇನೇ ಕಷ್ಟವಿದ್ದರೂ ತಮ್ಮ ಮಕ್ಕಳನ್ನು ಖುಷಿಯಾಗಿಡಲು ಅಮ್ಮಂದಿರು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ. ತನ್ನ ಮುದ್ದು ಮಗನಿಗೆ ಆಟಿಕೆಗಳನ್ನು ಖರೀದಿಸಲು ಸಾಧ್ಯವಾಗದ ತಾಯಿಯೊಬ್ಬರು ಈ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈಕೆಯ ಪೋಸ್ಟ್ ನೋಡಿದ ಅನಾಮಿಕ ಕರುಣಾಮಯಿಗಳು ಬಾಲಕನ ಮೇಲೆ ಅಗಾಧವಾದ ಕಾಳಜಿ ತೋರಿ ಆತನಿಗೆ ಆಟಿಕೆಗಳನ್ನು ಕಳುಹಿಸಿದ್ದಾರೆ.
ತನ್ನ ಮಗನಿಗೆ ಈ ಕರುಣಾಮಯಿ ’ಬರ್ತ್‌ಡೇಸಾಂಟಾ’ಗಳು ಮೇಲಿಂದ ಮೇಲೆ ಉಡುಗೊರೆಗಳನ್ನು ಕಳುಹಿಸಿದ ಕಾರಣ ಆತನ ಬಳಿ ಆಟಿಕೆಗಳ ಗುಡ್ಡವೇ ಸೃಷ್ಟಿಯಾಗಿದೆ ಎಂದು ರೆಡ್ಡಿಟ್ ಬಳಕೆದಾರ ಮಹಿಳೆ ನೆಟ್ಟಿಗರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
“ರೆಡ್ಡಿಟ್‌ನಿಂದಾಗಿ ನನ್ನ ಮಗನ ಹುಟ್ಟುಹಬ್ಬ ಭಾರೀ ಅದ್ಧೂರಿಯಾಗಿ ಸಾಗಿದೆ. ನೀವೆಲ್ಲಾ ಹೃದಯವಂತರು” ಎಂದು ಈ ಮಹಿಳೆ ಧನ್ಯತಾಭಾವ ವ್ಯಕ್ತಪಡಿಸಿದ್ದಾರೆ.