ಕಲಿಗಾಲದ ಪ್ರಭಾವವೋ ಏನೋ ದಿನಕ್ಕೊಂದು ಬಗೆಯ ಚಿತ್ರವಿಚಿತ್ರವಾದ, ಊಹಿಸಲೂ ಸಾಧ್ಯವಿಲ್ಲದ ಭಕ್ಷ್ಯಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ.
ಫರೀದಾಬಾದ್ನ ವ್ಯಕ್ತಿಯೊಬ್ಬರು ’ರಕ್ತದ ಜ್ಯೂಸ್’ ಹೆಸರಿನ ಪೇಯವೊಂದನ್ನು ಮಾರಾಟ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ಆರ್ ಯೂ ಹಂಗ್ರೀ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು
ತನ್ನ ಗಾಢ ಕೆಂಪು ಬಣ್ಣದಿಂದ ’ರಕ್ತದ ಜ್ಯೂಸ್’ ಎಂದು ಕರೆಯಲಾಗುವ ಈ ಜ್ಯೂಸ್ ಅನ್ನು ಪಾಲಕ್ ಎಲೆಗಳು, ಹಾಗಲಕಾಯಿ, ಅರಿಶಿನ, ಕ್ಯಾರೆಟ್ಗಳು, ಕಿತ್ತಳೆ ಹಾಗೂ ಬೀಟ್ರೂಟ್ ಜೊತೆಗೆ ಬೆಟ್ಟದ ನಲ್ಲಿಕಾಯಿಯನ್ನು ಅರೆದು ತಯಾರಿಸಲಾಗುತ್ತದೆ. ಬೀಟ್ ರೂಟ್ನಿಂದಾಗಿ ಈ ಜ್ಯೂಸ್ನ ಬಣ್ಣ ಕೆಂಪಾಗಿ ಕಾಣುತ್ತದೆ. ಕುಡಿಯಲು ಕೊಡುವ ಮುನ್ನ ಜ್ಯೂಸ್ಗೆ ಕರಿಉಪ್ಪು ಹಾಗೂ ನಿಂಬೆ ರಸ ಸೇರಿಸಲಾಗುವುದು.