ಕಾಮೆಂಟ್ ಸೆಕ್ಷನ್‌ಗಳಲ್ಲಿ ಅಸಭ್ಯವಾದ ಪ್ರತಿಕ್ರಿಯೆಗಳಿಂದ ಬಳಕೆದಾರರನ್ನು ರಕ್ಷಿಸಲು ಒಂದಷ್ಟು ಹೊಸ ಫೀಚರ್‌ಗಳನ್ನು ಇನ್‌ಸ್ಟಾಗ್ರಾಂ ಪರಿಚಯಿಸಿದೆ. ಈ ಫೀಚರ್‌ಗಳು ಸೆಲೆಬ್ರಿಟಿಗಳು ಹಾಗೂ ಹೈ-ಪ್ರೊಫೈಲ್ ಕ್ರಿಯೇಟರ್‌ಗಳಿಗೆ ಇನ್ನಷ್ಟು ಅನುಕೂಲವಾಗಲಿವೆ.
ಕಾಮೆಂಟ್‌ಗಳು ಹಾಗೂ ನೇರ ಸಂದೇಶದ ಮನವಿಗಳ ಮೇಲೆ ಮಿತಿ ಹೇರಲು ಈ ಫೀಚರ್‌ಗಳು ಅನುವಾಗಲಿದ್ದು, ಅಸಭ್ಯ ಕಾಮೆಂಟ್‌ಗಳು/ಕಿರಿಕಿರಿ ಮೆಸೇಜ್‌ಗಳಿಗೆ ಕಡಿವಾಣ ಹಾಕಲು ನೆರವಾಗಲಿದೆ ಎನ್ನಲಾಗಿದೆ.
BIG NEWS: ಡೆಲ್ಟಾ ಪ್ಲಸ್ ಗೆ ಮೊದಲ ಬಲಿ; ಕ್ಷಣ ಕ್ಷಣಕ್ಕೂ ಹೆಚ್ಚಿದ ಮೂರನೇ ಅಲೆ ಆತಂಕ
ಫೇಸ್ಬುಕ್ ಮಾಲೀಕತ್ವದ ಫೋಟೋ ಶೇರಿಂಗ್ ಅಪ್ಲಿಕೇಶನ್‌ನಲ್ಲಿ ಈ ಫೀಚರ್‌ಗಳನ್ನು ಆನ್ ಮಾಡಿದ ಮೇಲೆ ಪೋಸ್ಟ್ ಮಾಡಿದ ಬಳಕೆದಾರರನ್ನು ಫಾಲೋ ಮಾಡದ ಮಂದಿ ಮಾಡುವ ಕಾಮೆಂಟ್‌ಗಳು ಹಾಗು ಡಿಎಂ ಮನವಿಗಳು ಹೈಡ್ ಆಗಲಿವೆ.
ತೀರಾ ಅಸಭ್ಯ ಕಾಮೆಂಟ್‌ಗಳು ಹಾಗೂ ಡಿಎಂಗಳನ್ನು ವಿಪರೀತ ಮಾಡುವ ಬಳಕೆದಾರರಿಗೆ ವಾರ್ನಿಂಗ್ ಕೊಡುವ ಈ ಫೀಚರ್, ತನ್ನ ಸಾಮುದಾಯಿಕ ಮಾರ್ಗಸೂಚಿಗಳ ಬಗ್ಗೆ ಅರಿವು ಮೂಡಿಸಲಿದೆ.