ಹಾವು ಮನುಷ್ಯನಿಗೆ ಕಚ್ಚಿರುವ ಅನೇಕ ಘಟನೆಗಳಿವೆ. ಆದ್ರೆ ಮನುಷ್ಯನೇ ಹಾವಿಗೆ ಕಚ್ಚಿರುವ ವಿಷ್ಯ ಕೇಳಿದ್ದೀರಾ…? ಯಸ್. ಒಡಿಶಾದಲ್ಲಿ ಇಂಥ ಘಟನೆ ನಡೆದಿದೆ. ಜಾಜ್ಪುರದಲ್ಲಿ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದೆ. ಇದ್ರಿಂದ ಕೋಪಗೊಂಡ ವ್ಯಕ್ತಿ ಹಾವಿಗೆ ಕಚ್ಚಿದ್ದಾನೆ.
ಘಟನೆ ದನಗಾಡಿಯಾದಲ್ಲಿ ನಡೆದಿದೆ. ಗದ್ದೆಯಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ. ಹಾವು ಕಚ್ಚುತ್ತಿದ್ದಂತೆ ಕೋಪಗೊಂಡ ವ್ಯಕ್ತಿ ಹಾವನ್ನು ಹಿಡಿದು ಸೇಡು ತೀರಿಸಿಕೊಂಡಿದ್ದಾನೆ. ಹಾವನ್ನು ಕಚ್ಚಿ ಕಚ್ಚಿ ಕೊಂದಿದ್ದಾನೆ. ಹಾವು ಸಾಯುವವರೆಗೂ ಕಚ್ಚಿದ್ದಾನೆ ಎನ್ನಲಾಗಿದೆ.
ಕಿಶೋರ್ ಬದ್ರ್ ಹೆಸರಿನ ವ್ಯಕ್ತಿ ಬುಡಕಟ್ಟು ಕುಟುಂಬಕ್ಕೆ ಸೇರಿದ್ದಾನೆ. ಅವನ ವಯಸ್ಸು 45 ವರ್ಷ. ಹಾವು ಆತನಿಗೆ ಕಚ್ಚಿದ್ದು, ಆತ ವಾಪಸ್ ಹಾವಿಗೆ ಕಚ್ಚಿದ್ರೂ ಆತನಿಗೆ ಯಾವುದೇ ಅಪಾಯವಾಗಿಲ್ಲ. ಆತ ಆರೋಗ್ಯವಾಗಿದ್ದಾನೆಂದು ಮೂಲಗಳು ಹೇಳಿವೆ.