ಕೇವಲ 18.45 ಸೆಕೆಂಡ್‌ಗಳಲ್ಲಿ ಎರಡು ಲೀಟರ್ ಸೋಡಾ ಕುಡಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ. ಎರಿಕ್ ’ಬ್ಯಾಡ್ ಲ್ಯಾಂಡ್ಸ್’ ಬುಕರ್ ಹೆಸರಿನ ಈತನಿಗೆ ತಿನ್ನುವುದಲ್ಲಿ ದಾಖಲೆ ಮಾಡುವ ಅಭ್ಯಾಸವಿದೆ.
ಬ್ಯಾಡ್‌ಲ್ಯಾಂಡ್ಸ್‌ಚಗ್ಸ್ ಹೆಸರಿನ ಯೂಟ್ಯೂಬ್ ಚಾನೆಲ್ಲಿನಲ್ಲಿ ತಮ್ಮ ಈ ಹೊಸ ಸಾಹಸದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಎರಿಕ್. ಗಿನ್ನೆಸ್ ವಿಶ್ವ ದಾಖಲೆಯೊಂದನ್ನು ಮಾಡಬೇಕೆಂದು ಯಾವಾಗಲೂ ಕನಸು ಕಾಣುತ್ತಿದ್ದ ಎರಿಕ್ ಈ ರೀತಿಯಲ್ಲಿ ಅದನ್ನು ಸಾಕಾರಗೊಳಿಸಿದ್ದಾರೆ.
BIG BREAKING: 24 ಗಂಟೆಯಲ್ಲಿ 40,000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ; ಏರುತ್ತಲೇ ಇದೆ ಸಾವಿನ ಸಂಖ್ಯೆ…!
ನ್ಯೂಯಾರ್ಕ್‌ನ ಸೆಲ್ಡೆನ್‌ನಲ್ಲಿ ಈ ದಾಖಲೆ ನಿರ್ಮಿಸಿದ ಎರಿಕ್, ಇದಕ್ಕಾಗಿ ಎರಡು ಲೀಟರ್‌ನ ಸಕ್ಕರೆ-ರಹಿತ ಎನ್ನಲಾಗುವ ಕೋಲಾ ಬಾಟಲಿಯನ್ನು ಖಾಲಿ ಮಾಡಿದ್ದಾರೆ. ಕಾರ್ಬೋನೇಟೆಡ್ ಪೇಯಗಳನ್ನು ಹೀರುವ ಅಭ್ಯಾಸ ಇರುವ ಎರಿಕ್, “ಸೋಡಾ ಬಲು ರುಚಿಯಾಗಿತ್ತು,” ಎಂದು ದಾಖಲೆ ನಿರ್ಮಿಸಿದ ಬೆನ್ನಿಗೇ ಹೇಳಿದ್ದಾರೆ. ಮುಂದಿನ ದಾಖಲೆಗಾಗಿ ಘನ ರೂಪದ ಆಹಾರ ಸೇವನೆ ಮಾಡುವುದಾಗಿ ಎರಿಕ್ ಹೇಳಿಕೊಂಡಿದ್ದಾರೆ.