ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ, ಹಿಂಸೆಗೆ ಹಿಂಸೆ ಮದ್ದಲ್ಲ ಎಂಬುದು ಅವರಿಗೂ ಗೊತ್ತು ಎಂದು ಹೇಳುವ ಮುಲಕ ಸಿಎಂ ಬಸವರಾಜ್ ಬೊಮ್ಮಾಯಿ ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ತಂಟೆಗೆ ಬಂದರೆ ಸುಮ್ಮನಿರಬೇಕಿಲ್ಲ, ತಿರುಗಿ ಹೊಡೆಯಬೇಕು ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಹೇಳಿದ್ದು ಪ್ರಚೋದನಕಾರಿ ಹೇಳಿಕೆಯಲ್ಲ, ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಹಿಂದೆ ಆಗಿದ್ದ ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂದು ಹೇಳಿದರು.
ಈ ಕಾರಣಕ್ಕೆ ವಿಮಾನದಲ್ಲಿಯೇ ನಡೆದಿದೆ ಪ್ರತಿಭಟನೆ
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಚಿವ ಈಶ್ವರಪ್ಪ, ಎಲ್ಲೆಂದರಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ, ನಮ್ಮವರನ್ನು ವಧೆ ಮಾಡಲಾಗುತ್ತಿದೆ. ಅನಗತ್ಯವಾಗಿ ತಂಟೆಗೆ ಬಂದರೂ ಹಿಂದಿನಂತೆ ಸುಮ್ಮನೆ ಇರಬೇಕಿಲ್ಲ, ಹೊಡೆದರೆ ತಿರುಗಿ ಹೊಡೆಯಿರಿ. ಈಗ ಪಕ್ಷ ಸದೃಢವಾಗಿ ಬೆಳೆದಿದೆ ಎಂದು ಹೇಳಿಕೆ ನೀಡಿದ್ದರು. ಈಶ್ವರಪ್ಪ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.