ಸ್ವಾಭಾವಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಬಹೋಪಯೋಗಿ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಪ್ರಾವೀಣ್ಯ ಸಿದ್ಧಿಸಿಕೊಂಡಿರುವ ಚಿನ್ನತಂಬಿ, ತೆಂಗಿನಕಾಯಿಯ ಚಿಪ್ಪು ಹಾಗೂ ಪದರಗಳಿಂದ ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸುತ್ತಿದ್ದಾರೆ.
ತಮಿಳುನಾಡಿದ ವಿರುದ್ಧನಗರ ಜಿಲ್ಲೆಯ ಶ್ರೀವಿಳ್ಳಿಪುತ್ತೂರಿನ ಚಿನ್ನತಂಬಿ ಕೋವಿಡ್ ಸಾಂಕ್ರಮಿಕದಿಂದ ಕೆಲಸ ಕಳೆದುಕೊಂಡ ಬಳಿಕ ತಮ್ಮ ಕುಟುಂಬ ಸಾಕಲು ಹಣ ಹೊಂದಿಸಲು ಕಷ್ಟ ಪಡುತ್ತಿದ್ದರು.
ತಮ್ಮ ಬಿಡುವಿನ ಅವಧಿಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ರಚಿಸುತ್ತಿದ್ದ ಚಿನ್ನತಂಬಿ, ಈ ಹವ್ಯಾಸವನ್ನೇ ಈಗ ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 16 ಸಾವಿರ ಸಿಬ್ಬಂದಿ ನೇಮಕಾತಿ
ಕಣ್ಮನ ಸೆಳೆಯುವಂಥ ಚಹಾ ಕಪ್‌ಗಳು, ಕ್ಯಾಂಡಲ್ ಸ್ಟಿಕ್‌ಗಳು, ಹೂವಿನ ಕುಂಡಗಳು, ಹುಂಡಿಗಳು ಸೇರಿದಂತೆ ಅನೇಕ ಆಕರ್ಷಕ ವಸ್ತುಗಳನ್ನು ತೆಂಗಿನಕಾಯಿ ಚಿಪ್ಪಿನಿಂದ ತಯಾರಿಸುವ ಚಿನ್ನತಂಬಿ ಇದೀಗ ತಮ್ಮ ಉತ್ಪನ್ನಗಳನ್ನು ಅಕ್ಕಪಕ್ಕದ ಜಿಲ್ಲೆಗಳಿಗೂ ರಫ್ತು ಮಾಡುತ್ತಿದ್ದಾರೆ.
ತಮಿಳುನಾಡಿನ ಲಾಂಛನವಾದ ಶ್ರೀವಿಳ್ಳಿಪುತ್ತೂರಿನ ಆಂಡಾಳ್ ದೇವಸ್ಥಾನದ ಗೋಪುರದ ವಿನ್ಯಾಸ ಮಾಡುತ್ತಿರುವ ಚಿನ್ನತಂಬಿಗೆ ಅವರ ಮಡದಿ ಹಾಗೂ ಮಕ್ಕಳು ಬೆನ್ನಿಗೆ ನಿಂತಿದ್ದಾರೆ.