ಬಾಂಗ್ಲಾದೇಶದ ಪ್ರಸಿದ್ಧ ನಟಿ ಪೋರಿ ಮೋನಿ 2 ತಿಂಗಳ ಹಿಂದಷ್ಟೇ ಬೋಟ್ ಕ್ಲಬ್ನಲ್ಲಿ ತಮ್ಮ ಮೇಲೆ ಲೈಂಗಿಕ ಕಿರಕುಳ ನಡೆದಿದೆ ಎಂದು ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಇದೇ ನಟಿಯನ್ನು ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ ಪೊಲೀಸರು ಬಂಧಿಸಿದ್ದಾರೆ.
ಢಾಕಾದ ಬನಾನಿಯಲ್ಲಿರುವ ಪೋರಿ ಮೋನಿ ನಿವಾಸದಲ್ಲಿ 4 ಗಂಟೆಗಳ ಕಾಲ ತಲಾಶ್ ನಡೆಸಿದ ಪೊಲೀಸರು ರಾತ್ರಿ 9 ಗಂಟೆ ಸುಮಾರಿಗೆ ಈಕೆಯನ್ನು ಹೆಡ್ಕ್ವಾಟ್ರರ್ಸ್ಗೆ ಕರೆತಂದಿದ್ದಾರೆ. ಈಕೆಯ ನಿವಾಸದಲ್ಲಿ ಡ್ರಗ್ ಹಾಗೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್ಎಬಿ ಮಾಹಿತಿ ನೀಡಿದೆ.
ಕಂಚಿನ ಪದಕ ಕೈ ತಪ್ಪಿದರೂ ಇತಿಹಾಸ ರಚಿಸಿದ ಮಹಿಳಾ ಹಾಕಿ ತಂಡ
ಪೋರಿ ಪೋನಿ ಎಂದೇ ಖ್ಯಾತಿ ಗಳಿಸಿರುವ ಶಮಸುನ್ನಾಹರ್ ಸ್ಮೃತಿ ಜೂನ್ 8ನೇ ತಾರೀಖಿನಂದು ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಆರೋಪ ಮಾಡಿದ್ದರು. ಬೋಟ್ ಕ್ಲಬ್ನ ಮಾಜಿ ಅಧ್ಯಕ್ಷ ಹಾಗೂ ಗುಲ್ಶನ್ ಆಲ್ ಕಮ್ಯೂನಿಟಿ ಕ್ಲಬ್ ನಿರ್ದೇಶಕ, ಉದ್ಯಮಿ ಮತ್ತು ರಾಜಕಾರಣಿ ನಾಸಿರ್ ಉದ್ದೀನ್ ಮೊಹಮ್ಮದ್ ವಿರುದ್ಧ ಪೋರಿ ಪೋನಿ ಈ ಆರೋಪ ಮಾಡಿದ್ದರು.
ಆದರೆ ಆರೋಪಿಯು ಬಾಂಗ್ಲಾದೇಶದ ಪೊಲೀಸ್ ಇನ್ಪೆಕ್ಟರ್ ಜನರಲ್ ಬೆನಜೀರ್ ಅಹ್ಮದ್ರ ಆಪ್ತ ಸ್ನೇಹಿತನಾದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸುವಲ್ಲಿ ಪೋರಿ ಪೋನಿ ವಿಫಲರಾಗಿದ್ದರು.