ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ತಲುಪಿದ್ದ ಮಹಿಳಾ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ.
ಟರ್ಕಿಯ ಬುಸೆನಾಜ್ ಸುರ್ಮೆನೆಲ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೆಣೆಸಿದ್ದ ಲವ್ಲೀನಾ 5-0 ಅಂತರದಲ್ಲಿ ಪರಾಭವಗೊಂಡರು. ಟರ್ಕಿಯ ವಿಶ್ವ ಶ್ರೇಯಾಂಕಿತೆ ವಿರುದ್ಧ ಹೋರಾಡಿ ಸೋಲನ್ನು ಅನುಭವಿಸಿದ್ದರೂ ಸಹ ಲವ್ಲಿನಾ ದೇಶಕ್ಕೆ ಕಂಚಿನ ಪದಕ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವಾರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿ ಫೈನಲ್ಗೆ ಎಂಟ್ರಿ ಕೊಡುವ ಮೂಲಕ ಒಲಿಂಪಿಕ್ ಬಾಕ್ಸಿಂಗ್ ವಿಭಾಗದಲ್ಲಿ ದೇಶಕ್ಕೆ ಮೂರನೇ ಪದಕ ತಂದುಕೊಡುತ್ತಿರುವ ಆಟಗಾರ್ತಿ ಎನಿಸಿದ್ದರು. ಇಲ್ಲಿಯವರೆಗೆ ಈ ವಿಭಾಗದಲ್ಲಿ ಮೇರಿಕೋಮ್ ಹಾಗೂ ವಿಜಯೇಂದರ್ ಸಿಂಗ್ ಮಾತ್ರ ದೇಶಕ್ಕೆ ಪದಕ ತಂದುಕೊಟ್ಟವರಾಗಿದ್ದಾರೆ.