ಬಾಲಿವುಡ್ ರ್ಯಾಪರ್ ಯೋ ಯೋ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಯೋ ಯೋ ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಕೋರ್ಟ್ ಯೋ ಯೋ ಹನಿ ಸಿಂಗ್ಗೆ ನೋಟಿಸ್ ಕಳುಹಿಸಿದ್ದು, ಆಗಸ್ಟ್ 28ರೊಳಗಾಗಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ತಲ್ವಾರ್ ದಾಖಲಿಸಿರುವ ಪ್ರಕರಣದಲ್ಲಿ ತಮಗೆ ಪತಿಯಿಂದ ದೈಹಿಕವಾಗಿ, ಮಾನಸಿಕವಾಗಿ ಹಲ್ಲೆ ಉಂಟಾಗಿದೆ ಎಂದು ಉಲ್ಲೇಖಿಸಲಾಗಿದೆ. ಹನಿ ಸಿಂಗ್ ತಮ್ಮ ವೇತನವನ್ನು ನಗದು ರೂಪದಲ್ಲಿ ಪಡೆಯುತ್ತಿದ್ದರು. ಆದರೆ ತಮ್ಮ ವೈಯಕ್ತಿಕ ಖರ್ಚಿಗೆ ಅದನ್ನು ಬಳಕೆ ಮಾಡಲು ನೀಡುತ್ತಿರಲಿಲ್ಲ. ತಮ್ಮ ಹಾಡು, ಸಂಗೀತ ಪ್ರದರ್ಶನ ಹಾಗೂ ರಾಯಧನದ ಮೂಲಕ ಹನಿ ಸಿಂಗ್ ತಿಂಗಳಿಗೆ 4 ಕೋಟಿ ರೂಪಾಯಿ ಸಂಪಾದಿಸುತ್ತಾರೆ.
ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು
ಅವರು ಮದ್ಯ, ಡ್ರಗ್ಸ್ ಸೇವನೆ ಮಾಡುತ್ತಾರೆ. ಹನಿ ಸಿಂಗ್ ಒಬ್ಬ ದುರಹಂಕಾರಿ ಮಾತ್ರವಲ್ಲದೇ ಅನೇಕ ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಪಂಜಾಬಿ ನಟಿಯೊಂದಿಗೆ ಹನಿ ಸಿಂಗ್ ಅಕ್ರಮ ಸಂಬಂಧ ಬೆಳಕಿಗೆ ಬಂದ ಬಳಿಕ ಹನಿ ಸಿಂಗ್ ಇನ್ಮೇಲೆ ಇಂತಹ ತಪ್ಪು ಮಾಡೋದಿಲ್ಲ ಎಂದು ಪ್ರಮಾಣ ಮಾಡಿದ್ದ ಎಂದು ತಲ್ವಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಈ ಆರೋಪಗಳ ವಿಚಾರವಾಗಿ ಹನಿಸಿಂಗ್ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಯೋ ಯೋ ಹನಿಸಿಂಗ್ 2011ರ ಜನವರಿ 23ರಂದು ಶಾಲಿನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮುನ್ನ ಇವರಿಬ್ಬರು ರಹಸ್ಯವಾಗಿ 2 ವರ್ಷಗಳ ಕಾಲ ಡೇಟಿಂಗ್ ಕೂಡ ಮಾಡಿದ್ದರು. ಹನಿಸಿಂಗ್ ಎಲ್ಲಿಯೂ ಕೂಡ ತಾನು ವಿವಾಹಿತ ಎಂದು ಹೇಳಿಕೊಳ್ಳುತ್ತಿರಲಿಲ್ಲ ಎಂದೂ ತಲ್ವಾರ್ ಆರೋಪಿಸಿದ್ದಾರೆ.