ಅಗ್ಗದ ಸಾಲ ನೀಡೋದಾಗಿ ನಂಬಿಸಿ ಉದ್ಯಮಿಗಳನ್ನು ವಂಚಿಸಿದ ಆರೋಪದ ಅಡಿಯಲ್ಲಿ ಬಾಲಿವುಡ್ ನಿರ್ಮಾಪಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದಕ್ಷಿಣ ದೆಹಲಿಯ ನಿವಾಸಿ 55 ವರ್ಷದ ಅಜಯ್ ಯಾದವ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಅಜಯ್ ದೆಹಲಿ ಉದ್ಯಮಿ ರಾಹುಲ್ ನಾಥ್ರಿಗೆ 65 ಕೋಟಿ ರೂಪಾಯಿ ಸಾಲ ಕೊಡಿಸೋದಾಗಿ ನಂಬಿಸಿ 32 ಲಕ್ಷ ರೂಪಾಯಿ ದೋಚಿದ್ದರು.
ಯಾದವ್ ಲವ್ ಫಿರ್ ಕಭಿ, ಓವರ್ಟೈಮ್, ಭಡಾಸ್ ಹಾಗೂ ಸಸ್ಪೆನ್ಸ್ ಸೇರಿದಂತೆ ಇನ್ನು ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ .
ಯಾದವ್ರನ್ನು ಈ ಹಿಂದೆ ಮುಂಬೈನ ಕಾಂಡಿವಿಲಿ ಯುನಿಟ್ನ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದರು.
ಇವರು 2015ರಲ್ಲಿ ನಾಪತ್ತೆಯಾಗಿದ್ದ ಇವರನ್ನು ಮುಂಬೈ, ದೆಹಲಿ, ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ರೇಡ್ ಮಾಡಿದ ಬಳಿಕ ಬಂಧಿಸಲಾಗಿತ್ತು. ಕೊನೆಗೂ ಅವರನ್ನು ಮಥುರಾದಲ್ಲಿ ಬಂಧಿಸಲಾಯ್ತು. ಮೋಸದ ಹಣವನ್ನೆಲ್ಲ ಈತ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದ. ಆದರೆ ಬಹುತೇಕ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿವೆ ಎಂದು ಡಿಸಿಪಿ ಅತುಲ್ ಕುಮಾರ್ ಠಾಕೂರ್ ಹೇಳಿದ್ರು.