“ಶಾರ್ಕ್ ರೈಡರ್” ಎಂಬ ಅಡ್ಡ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಸಾಹಸಿಯ ಮೇಲೆ ಶಾರ್ಕ್ ದಾಳಿ ಮಾಡಿರುವ ಘಟನೆ ಆಸ್ಟ್ರೇಲಿಯಾದ ಕರಾವಳಿಯಲ್ಲಿ ನಡೆದಿದೆ.
32 ವರ್ಷದ ಆರನ್ ಮೊಯಿರ್ ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬಾರಾ ಕರಾವಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಬಳಿಕ ಏರ್ ಲಿಫ್ಟ್ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮೊಯೆರ್ ವಾರನಸ್ ದ್ವೀಪದ ಬಳಿ ಮೀನುಗಾರಿಕೆಯ ಚಾರ್ಟರ್ ಟ್ರಿಪ್ ನಡೆಸುತ್ತಿದ್ದಾಗ ಶಾರ್ಕ್ ದಾಳಿ ನಡೆಸಿದ್ದು, ಆತನ ಬೆನ್ನು, ಕಾಲು ಮತ್ತು ಹೊಟ್ಟೆಗೆ ಘಾಸಿಯಾಗಿದೆ.
ಲಸಿಕೆ ಸ್ವೀಕರಿಸದವರಿಗೆ ಸಂಬಳ ಕಟ್ ಎಂದಿದ್ದ ನಾಗಾಲ್ಯಾಂಡ್ ಸರ್ಕಾರಕ್ಕೆ ಹೈಕೋರ್ಟ್ ಮುಖಭಂಗ
ಶಾರ್ಕ್ ದಾಳಿಯ ಸಮಯದಲ್ಲಿ ಏನಾಯಿತು ಎಂದು ತಿಳಿದಿಲ್ಲ, ಮೊಯಿರ್ ಸಾಹಸಪಟ್ಟು ಹಡಗಿನ ಮೇಲೆ ಜೀವಂತವಾಗಿ ವಾಪಸಾಗಿದ್ದಾನೆ. ಮೀನುಗಾರಿಕಾ ಗುಂಪಿನ ಸದಸ್ಯರು ಪ್ರಥಮ ಚಿಕಿತ್ಸೆ ನೀಡಿ 15 ಗಂಟೆಗಳ ಬೋಟ್ ರೈಡ್ಮೂಲಕ ವಾಪಸ್ ಕರೆತಂದಿದ್ದಾರೆ.
ಮೊಯಿರ್ಗೆ ಮೂರು ಕಚ್ಚಿದ ಗುರುತುಗಳಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ. ದಾಳಿ ಮಾಡಿದ್ದು ಲೆಮನ್ ಶಾರ್ಕ್ ಎಂದು ನಂಬಲಾಗಿದ್ದು, ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಜಾತಿ ಶಾರ್ಕ್ ಸಾಮಾನ್ಯವಾಗಿ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲವಂತೆ.