ಬೇಕಾಗುವ ಸಾಮಾಗ್ರಿಗಳು:
ತುಪ್ಪ – ಅರ್ಧ ಕಪ್, ರವಾ- 1 ಕಪ್, ಸಕ್ಕರೆ – ಮುಕ್ಕಾಲು ಕಪ್, ಏಲಕ್ಕಿ- 3, ದ್ರಾಕ್ಷಿ, ಗೋಡಂಬಿ.
ಮಾಡುವ ವಿಧಾನ:
ಒಂದು ಬಾಣಲೆಗೆ ಅರ್ಧ ಕಪ್ ತುಪ್ಪ ಹಾಕಿ ಅದು ಕರಗಿದ ಮೇಲೆ ಒಂದು ಕಪ್ ನಷ್ಟು ಚಿರೋಟಿ ರವೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ರವೆಯ ಬಣ್ಣ ಬದಲಾಗುತ್ತಿದ್ದಂತೆ ಬಾಣಲೆಯಿಂದ ಇದನ್ನು ತೆಗೆದಿಡಿ. ಮತ್ತೊಂದು ಬಾಣಲೆಗೆ ಮುಕ್ಕಾಲು ಕಪ್ ಸಕ್ಕರೆ ಹಾಕಿ ಅದಕ್ಕೆ ಅರ್ಧ ಕಪ್ ನಷ್ಟು ನೀರು ಹಾಕಿ, ಸಕ್ಕರೆ ಕರಗಿ ಒಂದು ಕುದಿ ಬಂದ ಮೇಲೆ ಇದನ್ನು ರವೆಗೆ ಹಾಕಿ ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿ.
ಪದೇ ಪದೇ ಮುಖ ತೊಳೆದುಕೊಳ್ಳುವುದು ಒಳ್ಳೆಯದಾ…..?
ಗಟ್ಟಿಯಾಗುತ್ತಾ ಬರುವಾಗ ತುಪ್ಪದಲ್ಲಿ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಹಾಕಿ ಮಿಕ್ಸ್ ಮಾಡಿ. ಬಳಿಕ ಕುಟ್ಟಿ ಪುಡಿ ಮಾಡಿದ ಏಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪೂರ್ತಿಯಾಗಿ ತಳ ಬಿಟ್ಟ ಬಳಿಕ ಒಂದು ಪ್ಲೇಟ್ ಗೆ ಹಾಕಿ, ಸ್ವಲ್ಪ ತಣ್ಣಗಾದ ಬಳಿಕ ಬೇಕಾದ ಆಕಾರಕ್ಕೆ ಕಟ್ ಮಾಡಿಕೊಂಡರೆ ರುಚಿಕರವಾದ ರವಾ ಬರ್ಫಿ ರೆಡಿ.