alex Certify ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ 1 ಲಕ್ಷ ಭಾರತೀಯರಿಗೆ ಉದ್ಯೋಗ ನೀಡಲಿದೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ 1 ಲಕ್ಷ ಭಾರತೀಯರಿಗೆ ಉದ್ಯೋಗ ನೀಡಲಿದೆ ಈ ಕಂಪನಿ

ಉದ್ಯೋಗ ಹುಡುಕುತ್ತಿರುವವರಿಗೊಂದು ಖುಷಿ ಸುದ್ದಿಯಿದೆ. ದಿಗ್ಗಜ ಐಟಿ ಕಂಪನಿ ಕಾಗ್ನಿಜೆಂಟ್ (cognizant) ಈ ವರ್ಷ ಒಂದು ಲಕ್ಷ ಜನರಿಗೆ ಉದ್ಯೋಗ ನೀಡಲಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಶೇಕಡಾ 41.8 ರಷ್ಟು ಹೆಚ್ಚಳಗೊಂಡಿದೆ. ಈ ಹೆಚ್ಚಳದ ಜೊತೆ ಕಂಪನಿ ಒಟ್ಟೂ ಆದಾಯ 51.2 ಕೋಟಿ ಯುಎಸ್ ಡಾಲರ್ ಅಂದ್ರೆ ಸುಮಾರು 3,801.7 ಕೋಟಿ ರೂಪಾಯಿಯಾಗಿದೆ.

ಯುಎಸ್ ಮೂಲದ ಕಂಪನಿಯು ಜೂನ್ 2020 ರ ತ್ರೈಮಾಸಿಕದಲ್ಲಿ ಒಟ್ಟು 36.1 ಕೋಟಿ ಡಾಲರ್ ಆದಾಯವನ್ನು ಪಡೆದಿದೆ. ಕಂಪನಿಯು ಬುಧವಾರ ನೇಮಕಾತಿ ಬಗ್ಗೆ ಮಾಹಿತಿ ನೀಡಿದೆ. 2021ರಲ್ಲಿ ಕಂಪನಿ ಸುಮಾರು 1 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ.

ಕಾಗ್ನಿಜೆಂಟ್ ಸಿಇಒ ಬ್ರಿಯಾನ್ ಹಂಫ್ರೈಸ್ ಪ್ರಕಾರ, 2021ರಲ್ಲಿ ಕಂಪನಿ ಸುಮಾರು 1 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಿದೆ. 1 ಲಕ್ಷ ಎಸೋಸಿಯೇಟ್ಸ್ ಗೆ ತರಬೇತಿ ನೀಡಲಿದೆ. ಕಾಗ್ನಿಜೆಂಟ್ 2021 ರಲ್ಲಿ ಸುಮಾರು 30,000 ಪದವೀಧರರಿಗೆ ಮತ್ತು 2022ರಲ್ಲಿ 45,000 ಫ್ರೆಶರ್ಸ್ ಗೆ ಕೆಲಸ ನೀಡಲಿದೆ ಎಂದಿದ್ದಾರೆ.

ಎರಡನೇ ತ್ರೈಮಾಸಿಕದ ಟಾಪ್‌ಲೈನ್ ಫಲಿತಾಂಶಗಳು ನಮ್ಮ ಅಂದಾಜುಗಳನ್ನು ಮೀರಿವೆ. 2021 ರ ಆದಾಯದ ಬೆಳವಣಿಗೆಯನ್ನು ಶೇಕಡಾ 10.2- 11.2 ಕ್ಕೆ ಹೆಚ್ಚಿಸಿದ್ದೇವೆ ಎಂದವರು ಹೇಳಿದ್ದಾರೆ. ಗ್ರಾಹಕರ ಬಲವಾದ ಬೇಡಿಕೆಯನ್ನು ಪೂರೈಸಲು, ಕಾಗ್ನಿಜಂಟ್ ನೇಮಕಾತಿ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ ಎಂದವರು ತಿಳಿಸಿದ್ದಾರೆ.

ಈ ಮಧ್ಯೆ ಕಾಗ್ನಿಜೆಂಟ್ ಕಂಪನಿ ಕೆಲಸ ಬಿಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇದು ಕಂಪನಿಗೆ ತಲೆನೋವು ತಂದಿದೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿ ತೊರೆದ ಭಾರತೀಯರ ಸಂಖ್ಯೆ ಶೇಕಡಾ 31ರಷ್ಟಿದೆ. ಏಪ್ರಿಲ್ 2021ರಿಂದ ಜೂನ್ 2021ರ ಮಧ್ಯೆ ಐಟಿ ಕಂಪನಿ ಕೆಲಸ ತೊರೆದವರಲ್ಲಿ ಈ ಕಂಪನಿ ನೌಕರರು ಹೆಚ್ಚಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...