ಚಾರಿಟಿ ಕಾರ್ಯಕ್ಕೆಂದು ನಿಧಿ ಸಂಗ್ರಹಿಸುವ ಯತ್ನದಲ್ಲಿ ಅಮೆರಿಕದ ವ್ಯಕ್ತಿಯೊಬ್ಬರು ಫ್ಲಾರಿಡಾದ ಸೇಂಟ್ ಅಗಸ್ಟೀನ್‌ನಿಂದ ನ್ಯೂಯಾರ್ಕ್‌ವರೆಗೂ ವಿಶಿಷ್ಟವಾದ ದೋಣಿಯೊಂದರಲ್ಲಿ ಹೊರಟಿದ್ದಾರೆ.
ರೇಜ಼ಾ ಬಲುಚಿ ಎಂದು ಗುರುತಿಸಲಾದ ಈ ವ್ಯಕ್ತಿ ಕೇಂದ್ರ ಫ್ಲಾರಿಡಾದವರಾಗಿದ್ದು, ಫ್ಲಾರಿಡಾದಿಂದ ಬರ್ಮುಡಾವರೆಗೂ ಈ ವಿಶಿಷ್ಟವಾದ ದೋಣಿಯಲ್ಲಿ ಸಂಚರಿಸಿ ಚಾರಿಟಿಗೆ ದೇಣಿಗೆ ಸಂಗ್ರಹಿಸುವ ಉದ್ದೇಶ ಹೊಂದಿದ್ದಾರೆ.
ಹೀಗೆ ತಮ್ಮ ಕಡಲ ಯಾನದ ವೇಳೆ ಅಲೆಗಳ ಏರಿಳಿತಗಳ ಅಂದಾಜು ಸಿಗದೇ ಈತ ಇದ್ದ ದೋಣಿಯ ಕಡಲ ತೀರವೊಂದಕ್ಕೆ ಬಂದಿದೆ. ಅಲ್ಲಿದ್ದ ಪೊಲೀಸರು ವಿಚಾರಿಸಿದಾಗ ಆಸಕ್ತಿಕರ ವಿಷಯ ಅರಿವಿಗೆ ಬಂದಿದೆ.
ಮಗನ ಹೆಸರನ್ನು ರಿವೀಲ್ ಮಾಡಿದ ಹರ್ಭಜನ್ ಪತ್ನಿ
“ಕೇವಲ ನಿರ್ಗತಿಕರಿಗೆ ಮಾತ್ರವಲ್ಲದೇ ಕಡಲ ರಕ್ಷಕರು, ಪೊಲೀಸರು, ಅಗ್ನಿಶಾಮk ಸಿಬ್ಬಂದಿಗೂ ನಿಧಿ ಸಂಗ್ರಹಿಸುವ ಉದ್ದೇಶ ನನ್ನದು” ಎಂದು ಬಲುಚಿ ಹೇಳಿಕೊಂಡಿದ್ದಾರೆ. ಇಲ್ಲಿನ ಫ್ಲಾಗ್ಲರ್ ಕೌಂಟಿ ಶೆರೀಫ್ ಕಚೇರಿ ಫೇಸ್ಬುಕ್‌ನ ತನ್ನ ವಾಲ್‌ನಲ್ಲಿ ಈತನ ಈ ಯಾನದ ಬಗ್ಗೆ ಪೋಸ್ಟ್ ಮಾಡಿದೆ.
https://www.facebook.com/flaglersheriff/posts/1923741854467337