2020ರವರೆಗೂ ಅನೇಕರಿಗೆ ವರ್ಕ್ ಫ್ರಾಮ್ ಹೋಮ್ ಅನ್ನೋದು ಒಂದು ಕನಸೇ ಆಗಿತ್ತು. ಯಾರು ಕೂಡ ತಾವು ಇನ್ಮೇಲೆ ಈ ರೀತಿ ಮನೆಯಲ್ಲೇ ವರ್ಷಗಟ್ಟಲೇ ಕೂತು ಕಚೇರಿ ಕೆಲಸ ಮಾಡುತ್ತೇವೆ ಎಂದು ಕನಸಲ್ಲೂ ಭಾವಿಸಿರಲಿಲ್ಲ. ಈಗಂತೂ ವರ್ಕ್ ಫ್ರಮ್ ಹೋಮ್ ಅನ್ನೋದು ಎಲ್ಲರ ಮನೆಯಲ್ಲೂ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ.
ಈ ವರ್ಕ್ ಫ್ರಮ್ ಹೋಮ್ ಅನ್ನೋದು ಯಾವ ರೀತಿಯಲ್ಲಿ ತಳವಾಗಿ ಬೇರೂರಿದೆ ಅಂದರೆ ಮದುವೆ ಮನೆಯವರೆಗೂ ವ್ಯಾಪಿಸಿಬಿಟ್ಟಿದೆ.
ನಿಮ್ಮದೇ ಮದುವೆ ಕಾರ್ಯಕ್ರಮ ಇದ್ದಾಗಲೂ ನಿಮಗೆ ಕಲ್ಯಾಣ ಮಂಟಪದಲ್ಲೇ ಕಚೇರಿ ಮೀಟಿಂಗ್ಗೆ ಹಾಜರಾಗಬೇಕಾದ ಅನಿವಾರ್ಯತೆ ಬಂದರೆ ಹೇಗಾಗಬೇಡ ಹೇಳಿ.
ಆಶ್ಚರ್ಯಕರ ಎಂಬಂತೆ ಇಂತದ್ದೊಂದು ಘಟನೆಗೂ ಸೋಶಿಯಲ್ ಮೀಡಿಯಾ ಸಾಕ್ಷಿಯಾಗಿದೆ. ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿರುವ ವಿಡಿಯೋದಲ್ಲಿ ಕಲ್ಯಾಣ ಮಂಟಪದಲ್ಲಿದ್ದ ವರ ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ವೇಳೆಯೇ ಲ್ಯಾಪ್ಟಾಪ್ನ್ನು ಹಿಡಿದುಕೊಂಡು ಕಚೇರಿ ಕೆಲಸ ಮಾಡ್ತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನ ನೋಡಿ ವಧು ನಗುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
https://www.instagram.com/reel/CRqMZtLHdrQ/?utm_source=ig_embed&ig_rid=a39ddefd-6cb0-4fe1-b450-f8a9d398d97c