ಕೊರೊನಾ ಮಧ್ಯೆ ಜಪಾನ್ ನ ಟೋಕಿಯೊದಲ್ಲಿ ಶುಕ್ರವಾರ ಒಲಂಪಿಕ್ಸ್ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ಭಾರತದ ಕೇವಲ 30 ಆಟಗಾರರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಶನಿವಾರ ಸ್ಪರ್ಧೆಯಲ್ಲಿರುವ ಆಟಗಾರರು, ಉದ್ಘಾಟನಾ ಸಮಾರಂಭದಿಂದ ದೂರವಿರಲಿದ್ದಾರೆ.
ಆಟಗಾರರಿಗೆ ಕೊರೊನಾ ಭಯ ಕಾಡಬಾರದೆಂಬುದು ನಮ್ಮ ಉದ್ದೇಶವಾಗಿದೆ. ಆಟಗಾರರ ಸುರಕ್ಷತೆ ಬಹಳ ಮುಖ್ಯ. ಇದೇ ಕಾರಣಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಅಧಿಕಾರಿಗಳು ಸೇರಿ 50 ಮಂದಿ ಮಾತ್ರ ಪಾಲ್ಗೊಳ್ಳುವ ನಿರ್ಧಾರ ಕೈಗೊಂಡಿದ್ದೇವೆಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿ ದೇಶದ ಕೆಲ ಅಧಿಕಾರಿಗಳಿಗೆ ಮಾತ್ರ ಒಲಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಆದ್ರೆ ಆಟಗಾರರಿಗೆ ಯಾವುದೇ ಷರತ್ತಿಲ್ಲ. ಎಲ್ಲ ಆಟಗಾರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದ್ರೆ ಭಾರತದ ಎಲ್ಲ ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದ 125 ಆಟಗಾರರು ಸೇರಿದಂತೆ 228 ಭಾರತೀಯರು ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊರೊನಾ ಕಾರಣಕ್ಕೆ ಒಲಂಪಿಕ್ಸ್ ಗ್ರಾಮದಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ.