ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್ವೇರ್ ಸಂಸ್ಥೆ ಇನ್ಫೋಸಿಸ್ ಲಕ್ಷಾಂತರ ಮಂದಿಗೆ ಉದ್ಯೋಗವನ್ನ ನೀಡಿದೆ. ಆದರೆ ಈ ಇನ್ಫೋಸಿಸ್ ಕಂಪನಿ ಕುರಿತಾದ ಕುತೂಹಲಕಾರಿ ಕತೆಯೊಂದನ್ನ ಶೇರ್ ಮಾಡಿದ್ದಾರೆ.
1990ರಲ್ಲಿ ಇನ್ಫೋಸಿಸ್ ಕಂಪನಿಯನ್ನ 2 ಕೋಟಿ ರೂಪಾಯಿ ಖರೀದಿ ಮಾಡಲು ಆಫರ್ ನೀಡಲಾಗಿತ್ತಂತೆ. ಆದರೆ ಕಂಪನಿಯನ್ನು ಮಾರುವ ಉದ್ದೇಶವನ್ನೂ ನಾರಾಯಣ ಮೂರ್ತಿ ಹೊಂದಿರಲಿಲ್ಲ. ಹೀಗಾಗಿ ಕಂಪನಿಯನ್ನ ಮಾರಾಟ ಮಾಡುವ ನಿರ್ಧಾರದಿಂದ ಅವರು ಹಿಂದೆ ಸರಿದ್ರು. ಇಂದು ಭಾರತದ 2ನೇ ಅತಿ ದೊಡ್ಡ ಸಾಫ್ಟ್ವೇರ್ ಕಂಪನಿಯು 6.5 ಲಕ್ಷ ಕೋಟಿ ಬೆಲೆ ಹೊಂದಿದೆ.
30 ವರ್ಷಗಳ ಇತಿಹಾಸವನ್ನ ಹೊಂದಿರುವ ಈ ಸಂಸ್ಥೆಯಲ್ಲಿ ನಾರಾಯಣ ಮೂರ್ತಿ 21 ವರ್ಷಗಳ ಕಾಲ ಸಿಇಓ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 1991ರ ಬಳಿಕ ಒಂದೊಂದೇ ಮೈಲಿಗಲ್ಲನ್ನ ಏರುತ್ತಾ ಬಂದ ಈ ಸಂಸ್ಥೆ ಇದೀಗ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ.