alex Certify ಕೇವಲ ಮಹಿಳಾ ವ್ಯಾಪಾರಸ್ಥರಿಗೆಂದೇ ಸ್ಥಾಪನೆಯಾಗಿದೆ ಈ ವಿಶೇಷ ಮಾರ್ಕೆಟ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಮಹಿಳಾ ವ್ಯಾಪಾರಸ್ಥರಿಗೆಂದೇ ಸ್ಥಾಪನೆಯಾಗಿದೆ ಈ ವಿಶೇಷ ಮಾರ್ಕೆಟ್..​..!

ಆಸ್ಸಾಂ ರಾಜ್ಯದ ಜಿಲ್ಲೆಯೊಂದರಲ್ಲಿ ಮೊದಲ ಮಹಿಳಾ ಮಾರುಕಟ್ಟೆಯನ್ನ ಆರಂಭಿಸಲಾಗಿದ್ದು ಈ ವಿಶೇಷ ಮಾರುಕಟ್ಟೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಮೋನಿ ರೈಸಮ್​​ ಗೋಸ್ವಾಮಿ ಹೆಸರನ್ನ ಇಡಲಾಗಿದೆ.

ಭಾರತ ಹಾಗೂ ಬಾಂಗ್ಲಾ ದೇಶ ಗಡಿಯಲ್ಲಿರುವ ಕಾಚರ್​​ ಜಿಲ್ಲೆಯಲ್ಲಿ ಈ ಮಾರುಕಟ್ಟೆಯನ್ನ ತೆರೆಯಲಾಗಿದೆ. ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ಈ ಮಾರುಕಟ್ಟೆಯನ್ನ ಲೋಕಾರ್ಪಣೆಗೊಳಿಸಿದ್ದು ಇದಕ್ಕೆ ಮಾಮೋನಿ ಬಜಾರ್​ ಎಂದು ಹೆಸರಿಟ್ಟಿದ್ದಾರೆ.

ಈ ಮಾರುಕಟ್ಟೆಯಲ್ಲಿ ಕೇವಲ ಮಹಿಳಾ ವ್ಯಾಪರಸ್ಥರಿಗೆ ಮಾತ್ರ ಅವಕಾಶ ಇರಲಿದೆ. ಅಂದಹಾಗೆ ಆಸ್ಸಾಂನಲ್ಲಿ ಈ ರೀತಿ ಮಹಿಳಾ ಮಾರುಕಟ್ಟೆ ಸ್ಥಾಪನೆ ಆಗಿರೋದು ಇದೇ ಮೊದಲೇನಲ್ಲ. ಬರಾಕ್ ಕಣಿವೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಮಾರುಕಟ್ಟೆ ತೆರೆಯಲಾಗಿತ್ತು. ಇದರ ಜೊತೆಯಲ್ಲಿ ದಿಬ್ರುಗರ್​ ಹಾಗೂ ಜೋರ್ಹಟ್​​ನಲ್ಲೂ ಈ ರೀತಿಯ ಮಹಿಳಾ ಮಾರ್ಕೆಟ್​ ಸ್ಥಾಪನೆಯಾಗಿದೆ.

ಆಸ್ಸಾಂನ ಮೊದಲ ಮಹಿಳಾ ಮಾರುಕಟ್ಟೆಯನ್ನ 2 ವರ್ಷಗಳ ಹೊಂದೆ ಮೊದಲ ಬಾರಿಗೆ ನಮ್ರೂಪ್​ ಜಿಲ್ಲೆಯಲ್ಲಿ ಆರಂಭಿಸಲಾಗಿತ್ತು. ಇದಾದ ಬಳಿಕ ಮಣಿಪುರದಲ್ಲಿ ಕೂಡ ಮಹಿಳಾ ಮಾರ್ಕೆಟ್​ ಆರಂಭವಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...