ದೇಶದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಅನೇಕರು ವಾಹನಗಳನ್ನ ಚಲಾಯಿಸೋದನ್ನೇ ಬಿಡ್ತಿದ್ದಾರೆ. ಪದೇ ಪದೇ ಗ್ರಾಹಕನ ಜೇಬಿಗೆ ಕತ್ತರಿ ಬೀಳುತ್ತಲೇ ಇರೋದ್ರಿಂದ ಈ ರೀತಿ ಮಾಡೋದು ಅನಿವಾರ್ಯ ಕೂಡ ಆಗಿದೆ.
ಆದರೆ ವಾಹನ ಸವಾರರ ಈ ಕಷ್ಟವನ್ನ ಅರಿತ ಗುಜರಾತ್ ರಾಜಕೋಟ್ ವಿವಿಪಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಪೆಟ್ರೋಲ್ ಹಾಗೂ ವಿದ್ಯುತ್ಗಳೆರಡರ ಸಹಾಯದಿಂದಲೂ ಓಡಬಲ್ಲ ಮೋಟಾರ್ ಬೈಕ್ನ್ನು ಕಂಡು ಹಿಡಿದಿದ್ದಾರೆ.
ಯಾವ ಇಂಧನದ ಆಧಾರದ ಮೇಲೆ ಬೈಕ್ ಚಲಾಯಿಸಬೇಕು ಅನ್ನೋದನ್ನ ನಿರ್ಧರಿಸಲು ವಾಹನ ಹ್ಯಾಂಡಲ್ ಬಾರ್ನಲ್ಲಿರುವ ಸ್ವಿಚ್ನ್ನು ಒತ್ತಿದರೆ ಸಾಕಾಗುತ್ತೆ. ಹೈಬ್ರಿಡ್ ಮಾಡೆಲ್ನಲ್ಲಿ ತಯಾರಾಗಿರುವ ಈ ಬೈಕ್ನ ಒಳಗೆ ಇಂಜಿನ್ನ್ನು ಕೂರಿಸಲಾಗಿದೆ.
ಸಂಪೂರ್ಣ ಚಾರ್ಜ್ ಆದ ಬಳಿಕ ಈ ಬೈಕ್ ಪ್ರತಿ ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಸಾಗಲಿದೆ. ಪ್ರತಿ ಯುನಿಟ್ಗೆ ವಾಹನ ಸವಾರನಿಗೆ 17 ಪೈಸೆ ಖರ್ಚು ಆಗಲಿದೆ ಎಂದು ಕಾಲೇಜಿನ ಮೆಕಾನಿಕಲ್ ವಿಭಾಗದ ಡೀನ್ ಡಾ. ಮಣಿಯರ್ ಮಾಹಿತಿ ನೀಡಿದ್ರು.
ಇದೇ ರೀತಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ 10 ವಿದ್ಯಾರ್ಥಿಗಳು ಸೇರಿ ಎಲೆಕ್ಟ್ರಿಕ್ ಬೈಕ್ ಕಂಡು ಹಿಡಿದಿದ್ದಾರೆ. ಈ ಬೈಕ್ನ್ನು ಒಂದು ಬಾರಿ ಚಾರ್ಜ್ ಮಾಡಿದರೆ 40 ಕಿಲೋಮೀಟರ್ವರೆಗೆ ಸಾಗಲಿದೆ.