ಲಕ್ನೋ ವಿಶ್ವವಿದ್ಯಾಲಯದ ಭಾರತೀಯ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಪದವಿ ಪೂರ್ವ ವಿದ್ಯಾರ್ಥಿಗಳು ರಚಿಸಿದ್ದ ವಾಟ್ಸಾಪ್ ಗ್ರೂಪಿನಲ್ಲಿ ಅಶ್ಲೀಲ ವಿಡಿಯೋಗಳು ಹರಿದಾಡಿದ್ದು ಇದರಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯದ ಚೀಫ್ ಪ್ರಾಕ್ಟರ್ ಹಸನ್ಗಂಜ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ. ಈ ಕೃತ್ಯ ಎಸಗಿದ ದುಷ್ಕರ್ಮಿ ಯಾರು ಅನ್ನೋದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಪೇಪರ್ ಪ್ರೆಸೆಂಟೇಷನ್ಗಳನ್ನ ಹಂಚಿಕೊಳ್ಳಲು ಉಪನ್ಯಾಸಕರ ಸೂಚನೆಯ ಮೇಲೆಗೆ ಮಹಿಳಾ ವಿದ್ಯಾರ್ಥಿ ಈ ವಾಟ್ಸಾಪ್ ಗ್ರೂಪ್ ರಚಿಸಿದ್ದರು. ಶನಿವಾರ ತಡರಾತ್ರಿ ಈ ಗ್ರೂಪ್ನಲ್ಲಿ ಅಶ್ಲೀಲ ಚಿತ್ರ ಹಾಗೂ ಸಂದೇಶಗಳನ್ನ ಪೋಸ್ಟ್ ಮಾಡಲಾಗಿದೆ.
ವಾಟ್ಸಾಪ್ ಗ್ರೂಪ್ಗೆ ಸೇರ್ಪಡೆಯಾಗಲು ಲಿಂಕ್ನ್ನು ನೀಡಲಾಗಿತ್ತು. ಈ ಲಿಂಕ್ನ ಮೂಲಕ 170ಕ್ಕೂ ಅಧಿಕ ಬಿಎ ವಿದ್ಯಾರ್ಥಿಗಳು ಈ ಗ್ರೂಪ್ಗೆ ಸೇರ್ಪಡೆಯಾಗಿದ್ದರು. ಅಶ್ಲೀಲ ಸಂದೇಶಗಳು ಗ್ರೂಪ್ಗೆ ಬರುತ್ತಿದ್ದಂತೆಯೇ ಅನೇಕ ವಿದ್ಯಾರ್ಥಿಗಳು ಗ್ರೂಪ್ನಿಂದ ಲೆಫ್ಟ್ ಆಗಿ ಬಳಿಕ ಸೇರ್ಪಡೆಗೊಂಡಿದ್ದಾರೆ.
ವಿದ್ಯಾರ್ಥಿಗಳು ನೀಡಿರುವ ಮಾಹಿತಿಯ ಪ್ರಕಾರ ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬನ ಮೊಬೈಲ್ ಸಂಖ್ಯೆಯಿಂದ ಈ ಅಶ್ಲೀಲ ಮೆಸೇಜ್ಗಳು ಗ್ರೂಪ್ಗೆ ಬಂದಿದೆ ಎನ್ನಲಾಗಿದೆ.
ಶನಿವಾರ ರಾತ್ರಿ 11:58ರ ಸುಮಾರಿಗೆ ಮೊದಲ ಬಾರಿಗೆ ನಮ್ಮದೇ ಕಾಲೇಜಿನ ವಿದ್ಯಾರ್ಥಿಯ ಮೊಬೈಲ್ ನಂಬರ್ನಿಂದ ಅಶ್ಲೀಲ ಫೋಟೋ ಗ್ರೂಪ್ಗೆ ಬಂದಿತ್ತು. ಈ ಅಶ್ಲೀಲ ಫೋಟೋಗಳ ಮೂಲಕ ನಾಲ್ಕು ವಿದ್ಯಾರ್ಥಿನಿಯರನ್ನ ಗುರಿಯಾಗಿಸಲಾಗಿತ್ತು ಎಂದು ಮಹಿಳಾ ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾರೆ.