ಗುರುಗ್ರಾಮ: ಪಡಿತರ ಅಂಗಡಿಗಳಲ್ಲಿ ಧಾನ್ಯಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಹರಿಯಾಣ ರಾಜ್ಯದ ಗುರುಗ್ರಾಮದ ಫರುಖ್ ನಗರದಲ್ಲಿ ದೇಶದ ಮೊದಲ ‘ಅನ್ನಪೂರ್ಣಿ’ ಹೆಸರಿನ ಆಹಾರ ಧಾನ್ಯಗಳ ಎಟಿಎಂನ್ನು ಸ್ಥಾಪಿಸಲಾಗಿದೆ.
ಈ ಯೋಜನೆ ಬಗ್ಗೆ ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ದುಷ್ಯಂತ್ ಚೌತಲಾ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದರು. ಈ ಸಂಬಂಧ ಟ್ವೀಟ್ ಮಾಡಿದ್ದ ಅವರು, ‘’ಹರಿಯಾಣದ ಗುರುಗ್ರಾಮ ಜಿಲ್ಲೆಯಲ್ಲಿ ದೇಶದ ಮೊದಲ ಆಹಾರ ಧಾನ್ಯ ಎಟಿಎಂ ‘ಅನ್ನಪೂರ್ಣಿ’ ಸ್ಥಾಪಿಸಲಾಗಿದೆ ಎಂದು ನಾನು ಹೆಮ್ಮೆಯಿಂದ ಘೋಷಿಸುತ್ತಿದ್ದೇನೆ. ಸರಕಾರದಿಂದ ನಡೆಸ್ಪಲುಡುವ ಪಡಿತರ ಅಂಗಡಿಗಳಲ್ಲಿ ಧಾನ್ಯಗಳ ವಿತರಣೆಯನ್ನು ಸುಲಭ ಹಾಗೂ ತೊಂದರೆಯಿಲ್ಲದೆ ಮಾಡುವುದು ಇದರ ಉದ್ದೇಶ ಎಂದು ಹೇಳಿದ್ದಾರೆ.’’
ಸದ್ಯ ಎಟಿಎಂನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ ಎಂದು ಚೌತಲಾ ಹೇಳಿದ್ದಾರೆ. ಈ ಯೋಜನೆಯು ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ತಲುಪಬೇಕು ಅನ್ನೋದು ಸರಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಸ್ ಪ್ರದರ್ಶನದ ವೇಳೆ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ
ಇನ್ನು ಈ ಎಟಿಎಂ ಯೋಜನೆ ಯಶಸ್ವಿಯಾದ ನಂತರ, ಧಾನ್ಯಗಳಲ್ಲಿನ ಪೂರೈಕೆಗಳ ಸಮಸ್ಯೆ ಬಗೆಹರಿಸಲು ಇಂತಹ ಆಹಾರಧಾನ್ಯಗಳ ವಿತರಿಸುವ ಎಟಿಎಂಗಳನ್ನು ರಾಜ್ಯದಾದ್ಯಂತ ಇರುವ ಸರ್ಕಾರಿ ಡಿಪೋಗಳಲ್ಲಿ ಸ್ಥಾಪಿಸುವ ಯೋಜನೆ ಇದೆ ಎಂದು ಚೌತಲಾ ಹೇಳಿದ್ದಾರೆ. ಈ ಎಟಿಎಂ 5ರಿಂದ 7 ನಿಮಿಷಗಳಲ್ಲಿ 70 ಕೆ.ಜಿ. ಧಾನ್ಯಗಳನ್ನು ವಿತರಿಸಬಹುದು.
ಇನ್ನು ಈ ಅನ್ನಪೂರ್ಣಿ ಎಟಿಎಂ ಟಚ್ ಸ್ಕ್ರೀನ್ ಹೊಂದಿರುವ ವ್ಯವಸ್ಥೆ ಹೊಂದಿದೆ. ಧಾನ್ಯಗಳನ್ನು ಸ್ವೀಕರಿಸಲು ಗ್ರಾಹಕರು ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಯಲ್ಲಿ ನಮೂದಾಗಿರುವ ಸಂಖ್ಯೆಯನ್ನು ನಮೂದಿಸಬಹುದು ಎಂದು ಹೇಳಲಾಗಿದೆ. ಈ ಯಂತ್ರದ ಮುಖಾಂತರ ಗೋಧಿ, ಅಕ್ಕಿ ಮತ್ತು ರಾಗಿಯನ್ನು ವಿತರಿಸಲಾಗುತ್ತದೆ.
9 ತಿಂಗಳ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪಾಪಿ
ಇನ್ನು ಕೇಂದ್ರ ಸರಕಾರದ ಮುಖೇನ ಈ ಯಂತ್ರವನ್ನು ದೇಶಾದ್ಯಂತ ಸ್ಥಾಪಿಸಲು ಯೋಜಿಸಲಾಗಿದೆ. ಸದ್ಯ ಐದು ರಾಜ್ಯಗಳಾದ ಕರ್ನಾಟಕ, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಹಾಗೂ ಉತ್ತರಾಖಂಡ್ ನಲ್ಲಿ ಪ್ರಾರಂಭಿಸಲು ಚಿಂತಿಸಲಾಗಿದೆ.
ಇನ್ನು ಅನ್ನಪೂರ್ಣಿ ಎಟಿಎಂಗಳು ವಿಶ್ವ ಆಹಾರ ಕಾರ್ಯಕ್ರಮ(ಡಬ್ಲ್ಯೂಎಫ್ ಪಿ)ದ ಒಂದು ಭಾಗವಾಗಿದೆ. ಇದು ಭಾರತದಲ್ಲಿ ಬಡತನವಿರುವ ಪ್ರದೇಶಗಳಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ ಆಹಾರ ಕೊರತೆಯನ್ನು ನಿವಾರಿಸಲು ಭಾರತ ಸರಕಾರದೊಂದಿಗೆ ಕೈಜೋಡಿಸಿದೆ. ಡಬ್ಲ್ಯೂಎಫ್ ಪಿಯು ಆಹಾರ ಕೊರತೆ ಹಾಗೂ ಹಸಿವಿನ ಕೊರತೆ ಪರಿಹರಿಸಲು ಇಥಿಯೋಪಿಯನ್, ಮಾಲಿ, ಬಾಂಗ್ಲಾದೇಶ, ಕೀನ್ಯಾ, ಸುಡಾನ್ ಹಾಗೂ ಇನ್ನಿತರೆ ದೇಶಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.