ಮಾಸ್ಕೋ: ಅದೃಷ್ಟವಿದ್ದಲ್ಲಿ ಸಾಗರದಲ್ಲಿ ಬಿದ್ದರೂ ಈಜಿ ದಡ ಸೇರಬಹುದು ಎಂಬ ಮಾತಿದೆ. ಹಾಗೆಯೇ ಇಲ್ಲಿಬ್ಬರು ಯುವತಿಯರ ಅದೃಷ್ಟ ನೋಡಿ. 6,300 ಅಡಿಗಳ ಎತ್ತರದಿಂದ ಬಿದ್ದರೂ ಕೂಡ ಬದುಕುಳಿದಿರುವ ಎದೆ ಝಲ್ಲೆನಿಸುವ ಘಟನೆ ನಡೆದಿದೆ.
ರಷ್ಯಾದ ಕ್ಯಾಸ್ಪಿಟನ್ ಸಮುದ್ರದ ಬಳಿ ಈ ಘಟನೆ ನಡೆದಿದೆ. 6,300 ಅಡಿಯ ಬಂಡೆ ಮೇಲಿನಿಂದ ಒಂದು ದೊಡ್ಡದಾದ ಉಯ್ಯಾಲೆ ಕಟ್ಟಲಾಗಿದೆ. ಇದರಲ್ಲಿ ಕೂತಿದ್ದ ಇಬ್ಬರು ಯುವತಿಯರನ್ನು ಯುವಕನೊಬ್ಬ ತಳ್ಳುತ್ತಿದ್ದ. ಈ ವೇಳೆ ಏಕಾಏಕಿ ಜೋಕಾಲಿ ಕಟ್ ಆಗಿ ಯುವತಿಯರು ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
BIG NEWS: ದೆಹಲಿಗೆ ಹೋಗಿ 2000 ಕೋಟಿ ಕೊಡ್ತೀವಿ ನಮ್ಮನ್ನು ಸಿಎಂ ಮಾಡಿ ಅಂದಿದ್ರು; ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಸುರಕ್ಷತಾ ಸಾಧನಗಳ ಅಸಮರ್ಪಕತೆಯಿಂದ ಈ ಅವಘಡ ಸಂಭವಿಸಿದೆ. ಈ ಎದೆ ಝಲ್ಲೆನಿಸುವ ದೃಶ್ಯದ ವಿಡಿಯೋವನ್ನು 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.
https://twitter.com/Random_Uncle_UK/status/1415209072090042372?ref_src=twsrc%5Etfw%7Ctwcamp%5Etweetembed%7Ctwterm%5E1415209072090042372%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-two-women-fall-off-swing-at-6300-ft-cliff-in-russia-escape-with-minor-injuries-3974492.html