ನವದೆಹಲಿ: ಜುಲೈ 17 ರಂದು ಪೆಟ್ರೋಲ್ ದರ ಮತ್ತೊಮ್ಮೆ ಏರಿಕೆ ಕಂಡಿದೆ. ಡೀಸೆಲ್ ದರದಲ್ಲಿ ಬದಲಾವಣೆಯಾಗಿಲ್ಲ. ದೇಶಾದ್ಯಂತ ಪೆಟ್ರೋಲ್ ದರ 26 ರಿಂದ 34 ಪೈಸೆಯಷ್ಟು ಏರಿಕೆಯಾಗಿದೆ. ಈ ಮೂಲಕ ಪೆಟ್ರೋಲ್ ದರ ಹೊಸ ದಾಖಲೆ ಬರೆದಿದೆ.
ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 107.83 ರೂಪಾಯಿ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್ ಗೆ 101.84 ರೂ., ಚೆನ್ನೈನಲ್ಲಿ 102.49 ರೂ., ಮಧ್ಯಪ್ರದೇಶದ ಬಾಲಘಾಟ್ ನಲ್ಲಿ ಪೆಟ್ರೋಲ್ ಬೆಲೆ 112.41 ರೂಪಾಯಿಗೆ ತಲುಪಿದೆ. ಬೆಂಗಳೂರಲ್ಲಿ 105.25 ರೂ.ಗೆ ಏರಿಕೆಯಾಗಿದೆ.