ದೇಶದ್ರೋಹದ ವಿರೋಧಿ ಕಾನೂನುಗಳ ಹೆಸರಿನಲ್ಲಿ ದೇಶದೆಲ್ಲೆಡೆ ಜನಸಾಮಾನ್ಯರ ವಾಕ್ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವನ್ನು ಕಾನೂನು ಪಾಲನಾ ಪಡೆಗಳು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಭಾರತೀಯ ದಂಡ ಸಂಹಿತೆಯ 124ಎ (ದೇಶದ್ರೋಹ) ವಿಧಿಗೆ ಮಾರ್ಪಾಡುಗಳು ಆಗಬೇಕಿವೆ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ ರವಾನೆ ಮಾಡಿದ್ದಾರೆ.
BIG NEWS: ಟಿ ಸೀರಿಸ್ ಕಂಪನಿ ಎಂಡಿ ಭೂಷಣ್ ಕುಮಾರ್ ವಿರುದ್ಧ ರೇಪ್ ಕೇಸ್
ಈ ನಿಟ್ಟಿನಲ್ಲಿ ಮೇಲ್ಕಂಡ ಕಾನೂನು ಹಾಗೂ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೇಗೆ ಅಧಿಕಾರವನ್ನು ಬಳಸಿಕೊಳ್ಳಲಾಗುತ್ತಿವೆ ಎಂದು ನ್ಯಾಯಾಂಗ ಪ್ರೇರಿತ ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್ ಚಿಂತನೆ ಮಾಡುತ್ತಿದೆ ಎಂದ ರಮಣ, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ವಿರೋಧಿಗಳನ್ನು ಜೈಲಿಗೆ ಅಟ್ಟಲು ದೇಶದ್ರೋಹದ ವಿರೋಧಿ ಕಾನೂನುಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಆಧುನಿಕ ಪ್ರಜಾಪ್ರಭುತ್ವದ ಕಾನೂನಿನಲ್ಲೂ ಸಹ 124ಎ ಯಂಥ ಬ್ರಿಟೀಷ್ ಕಾಲದ ಕಾನೂನಿನ ಅಗತ್ಯವೇನಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಇದೇ ವೇಳೆ, 1962ರಲ್ಲಿ ಖುದ್ದು ತಾನೇ ಹೊರಡಿಸಿದ್ದ ಆದೇಶವೊಂದನ್ನು ಮರು ಪರಿಶೀಲನೆ ಮಾಡಬೇಕಿರುವ ಸುಪ್ರೀಂ ಕೋರ್ಟ್, ವಾಕ್ ಸ್ವಾತಂತ್ರ್ಯ ಹತ್ತಿಕ್ಕಲು ಚುನಾಯಿತ ಸರ್ಕಾರಗಳು ದೇಶದ್ರೋಹ ವಿರೋಧಿ ಕಾನೂನುಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಬಗ್ಗೆ ಮಾತೆತ್ತಿದೆ.
2016ರಿಂದ ದೇಶದ್ರೋಹದ ಕೇಸ್ಗಳನ್ನು ಸುಖಾಸುಮ್ಮನೇ ಜಡಿಯುವವ ಕೈಂಕರ್ಯ ವಿಪರೀತ ಆಗಿದೆ ಎಂದು ಆರೋಪಿಸಿ ಹಿರಿಯ ಪತ್ರಕರ್ತ ಶಶಿ ಕುಮಾರ್ ಸಲ್ಲಿಸಿದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.